alex Certify ಅಪ್ಪನ ಆಟವನ್ನ ಎಂಜಾಯ್​ ಮಾಡಿದ ರಹಾನೆ ಪುತ್ರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪನ ಆಟವನ್ನ ಎಂಜಾಯ್​ ಮಾಡಿದ ರಹಾನೆ ಪುತ್ರಿ..!

ಅಬುದಾಬಿಯ ಶೇಖ್​ ಜಾಯೆದ್​ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮ್ಯಾಚ್​ನಲ್ಲಿ ರಾಯೆಲ್​ ಚಾಲೆಂಜರ್ಸ್ ತಂಡವನ್ನ ದೆಹಲಿ ಕ್ಯಾಪಿಟಲ್ಸ್ ಮಣಿಸಿದೆ. ಆರ್​ಸಿಬಿಯನ್ನ ಸೋಲಿಸುವಲ್ಲಿ ಅಜಿಂಕ್ಯ ರಹಾನೆ ಅವರ ಸ್ಕೋರ್​ ಕೂಡ ನಿರ್ಣಾಯಕ ಪಾತ್ರ ವಹಿಸಿದೆ.

ಗೆಲುವಿನ ಮೂಲಕ ಡಿಸಿ ಐಪಿಎಲ್​ 2020 ಪ್ಲೇ ಆಫ್​ನಲ್ಲಿ ಸ್ಥಾನ ಪಡೆದುಕೊಂಡಿದೆ. ಸೋಮವಾರ ನಡೆದ ಮ್ಯಾಚ್​ನಲ್ಲಿ ದೆಹಲಿಯ ಆಟವನ್ನ ನೋಡಿದ ಅಭಿಮಾನಿಗಳು ಅಷ್ಟೊಂದು ಖುಷಿಯಾಗಿರಲಿಲ್ಲ. ಆದರೆ ರಹಾನೆ ಪುತ್ರಿ ಮಾತ್ರ ತನ್ನ ತಂದೆಯ ಆಟವನ್ನ ನೋಡಿ ಸಂಭ್ರಮಿಸಿದ್ದಾಳೆ.

ರಹಾನೆ ಪತ್ನಿ ರಾಧಿಕಾ ಈ ವಿಡಿಯೋವನ್ನ ಚಿತ್ರೀಕರಿಸಿದ್ದು ಇದರಲ್ಲಿ ಪುತ್ರಿ ಆರಾಧ್ಯ ತನ್ನ ತಂದೆಗೆ ಚಿಯರ್ಸ್ ಮಾಡುತ್ತಿದ್ದಾಳೆ. ಈ ವಿಡಿಯೋವನ್ನ ದೆಹಲಿ ಕ್ಯಾಪಿಟಲ್ಸ್ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿದೆ. ರಹಾನೆ 46 ಎಸೆತಗಳಲ್ಲಿ 60 ರನ್​ಗಳನ್ನ ಸೇರಿಸಿದ್ದಾರೆ.

— Delhi Capitals (Tweeting from ??) (@DelhiCapitals) November 3, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...