ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಅಡಿಲೆಡ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಮಾಡಿದ ಸಣ್ಣ ತಪ್ಪಿನಿಂದಾಗಿ ಕೊಹ್ಲಿ ಶತಕ ವಂಚಿತರಾಗಿದ್ದರು.
ಈ ಪ್ರಮಾದಕ್ಕಾಗಿ ನಾನು ಕೊಹ್ಲಿ ಬಳಿ ಕ್ಷಮೆ ಯಾಚಿಸಿದ್ದೇನೆ ಎಂದು ರಹಾನೆ ಹೇಳಿದ್ದಾರೆ.
ಭೋಜನ ವಿರಾಮ ಬಳಿಕ ಟೀಂ ಇಂಡಿಯಾ ಕೇವಲ 3 ವಿಕೆಟ್ ನಷ್ಟಕ್ಕೆ 180ಕ್ಕೂ ಹೆಚ್ಚು ರನ್ ಗಳಿಸಿ ದೊಡ್ಡ ಮೊತ್ತವನ್ನ ಕಲೆ ಹಾಕುವ ಗುರಿ ಹೊಂದಿತ್ತು. ಆದರೆ 1 ರನ್ ತೆಗೆದುಕೊಳ್ಳಲು ಹೋಗಿ ರಹಾನೆ ಕೊಹ್ಲಿ ರನೌಟ್ ಆಗಲು ಕಾರಣರಾದರು. 74 ರನ್ ಗಳಿಸಿದ್ದ ಕೊಹ್ಲಿ ಇನ್ನೇನು ಶತಕಕ್ಕೆ ಕೆಲವೇ ರನ್ಗಳು ಬಾಕಿ ಇರೋವಾಗ ಪೆವಿಲಿಯನ್ ಹಾದಿ ಹಿಡಿಯುವಂತಾಗಿತ್ತು.
ಈ ಘಟನೆ ಬಳಿಕ ನನಗೆ ತುಂಬಾನೇ ಬೇಜಾರಾಗಿತ್ತು. ಹಾಗಾಗಿ ಪಂದ್ಯ ಮುಗಿದ ಬಳಿಕ ನಾನು ಕೊಹ್ಲಿ ಬಳಿ ಹೋಗಿ ಕ್ಷಮೆ ಯಾಚಿಸಿದೆ. ಕೊಹ್ಲಿ ಕೂಡ ಈ ಘಟನೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ನನಗೆ ಕಾಣಲಿಲ್ಲ. ನನ್ನ ಕ್ಷಮೆಯನ್ನ ಅವರು ಖುಷಿಯಿಂದಲೇ ಸ್ವೀಕರಿಸಿದರು ಎಂದು ರಹಾನೆ ಹೇಳಿದ್ರು.
ನಾವಿಬ್ಬರು ಆಗ ತಂಡಕ್ಕೆ ಹೆಚ್ಚು ರನ್ಗಳನ್ನ ನೀಡುವ ಇರಾದೆಯನ್ನ ಹೊಂದಿದ್ವಿ. ಆದರೆ ಒಮ್ಮೊಮ್ಮೆ ಕ್ರಿಕೆಟ್ನಲ್ಲಿ ಇಂತಹ ಘಟನೆಗಳು ನಡೆಯುತ್ತೆ. ಆಗ ಆ ಘಟನೆಗಳನ್ನ ಗೌರವಿಸಿ ಮುಂದಿನ ಹೆಜ್ಜೆ ಇಡಬೇಕಾಗುತ್ತೆ ಎಂದು ರಹಾನೆ ಹೇಳಿದ್ದಾರೆ.