ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ಟೀಂ ಇಂಡಿಯಾ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆಯನ್ನ ಅಸಾಧಾರಣ ನಾಯಕ ಎಂದು ಹಾಡಿ ಹೊಗಳಿದ್ದಾರೆ.
ಮಾತ್ರವಲ್ಲದೇ, ರಹಾನೆಯ ಆಕ್ರಮಣಾಕಾರಿ ಶೈಲಿ ಟೀಂ ಇಂಡಿಯಾ ತಂಡಕ್ಕೆ ಸರಿ ಹೊಂದುತ್ತಿದೆ ಎಂದು ಹೇಳಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡಿಸೆಂಬರ್ 17 ರಂದು ಅಡಿಲೇಡ್ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದ ಬಳಿಕ ಪಿತೃತ್ವದ ರಜೆ ಪಡೆಯಲಿದ್ದಾರೆ. ಇದಾದ ಬಳಿಕ ಬಾರ್ಡರ್ – ಗವಾಸ್ಕರ್ ಟ್ರೋಫಿಯ ಉಳಿದ ಮೂರು ಪಂದ್ಯಗಳ ಜವಾಬ್ದಾರಿ ಅಂಜಿಂಕ್ಯ ರಹಾನೆ ಹೆಗಲೇರಲಿದೆ. ನಾನು 2017ರಲ್ಲಿ ಧರ್ಮಶಾಲಾದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಮ್ಯಾಚ್ನಲ್ಲಿ ರಹಾನೆ ನಾಯಕತ್ವ ಶೈಲಿಯನ್ನ ನೋಡಿದ್ದೇನೆ. ನಿಜವಾಗಿಯೂ ರಹಾನೆ ಒಬ್ಬ ಆಕ್ರಮಣಕಾರಿ ನಾಯಕ ಎಂದು ಅವರು ಹೇಳಿದ್ರು.