ಬುಧವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು(ಡಕ್ವರ್ಥ್ ನಿಯಮದನ್ವಯ) 119 ರನ್ ಗಳಿಂದ ಸೋಲಿಸಿದ ಟೀಂ ಇಂಡಿಯಾ ಆತಿಥೇಯರ ವಿರುದ್ಧದ ಸರಣಿಯನ್ನು 3-0 ವೈಟ್ ವಾಶ್ ಮಾಡಿದೆ.
ಇದರೊಂದಿಗೆ ಶಿಖರ್ ಧವನ್ ನಾಯಕತ್ವದಲ್ಲಿ ಭಾರತದ 2 ನೇ ODI ಸರಣಿ ವಿಜಯ ದಾಖಲಿಸಿದೆ. 35 ಓವರ್‌ಗಳಲ್ಲಿ 257 ರನ್‌ಗಳ ಪರಿಷ್ಕೃತ ಗುರಿಯನ್ನು ಬೆನ್ನಟ್ಟಿದ ವಿಂಡೀಸ್ 26 ಓವರ್ ಗಳಲ್ಲಿ 137 ರನ್‌ಗಳಿಗೆ ಆಲ್ ಔಟ್ ಆಯಿ ಸೋಲು ಕಂಡಿದೆ. ಯುಜುವೇಂದ್ರ ಚಾಹಲ್ 4 ವಿಕೆಟ್ ಕಬಳಿಸಿದರು. ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಪಡೆದರು.
ಶಿಖರ್ ಧವನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡ ನಂತರ ಮಳೆಯಿಂದಾಗಿ ಎರಡು ಬಾರಿ ಪಂದ್ಯ ಸ್ಥಗಿತಗೊಂಡಿತ್ತು, ಶಿಖರ ಧವನ್ 58, ಶುಭಮನ್ ಗಿಲ್ 98, ಶ್ರೇಯಸ್ ಅಯ್ಯರ್ 44, ಸೂರ್ಯ ಕುಮಾರ್ ಯಾದವ್ 8, ಸಂಜು ಸ್ಯಾಮ್ಸನ್ 6 ರನ್ ಗಳಿಸಿದರು. ಭಾರತ 36 ಓವರ್ ಗಳಲ್ಲಿ 3 ವಿಕೆಟ್ ಗೆ 225 ರನ್ ಗಳಿಸಿತು. ವಿಂಡೀಸ್ ಪರವಾಗಿ ಹೇಡನ್ ವಾಲ್ಷ್ 2, ಅಕಿಲ್ ಹುಸೇನ್ 1 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 26 ಓವರ್ ಗಳಲ್ಲಿ 137 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಶೈ ಹೋಪ್ 22, ಬ್ರೆಂಡನ್ ಕಿಂಗ್ 42, ನಿಕೋಲಸ್ ಪೂರನ್ 42 ಹೊರತುಪಡಿಸಿ ಉಳಿದವರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.