alex Certify ಭರ್ಜರಿ ಜಯದೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಜಯದೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದ ಭಾರತ

ಪೋರ್ಟ್ ಆಫ್ ಸ್ಪೇನ್: ಎರಡನೇ ಏಕದಿನ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಚೇಸ್ ಮಾಡುವುದರೊಂದಿಗೆ ಭರ್ಜರಿ ಜಯಗಳಿಸಿದ ಭಾರತ ಸರಣಿ ಜಯಿಸಿದೆ.

ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ ಒವೆಲ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ರನ್ ಮಳೆಯೇ ಸುರಿದಿದೆ. ಉಭಯ ತಂಡಗಳು 300ಕ್ಕೂ ಅಧಿಕ ರನ್ ಗಳಿಸಿವೆ.

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿತು. ಶೈ ಹೋಪ್ 115, ಕೈಲ್ ಮೇಯರ್ 39, ಶಾಮ್ರಾ ಬ್ರೂಕ್ಸ್ 35, ನಿಕೋಲಸ್ ಪೂರನ್ 74 ರನ್ ಗಳಿಸಿದರು. ಭಾರತದ ಪರವಾಗಿ ಶಾರ್ದೂಲ್ ಠಾಕೂರ್ 3, ದೀಪಕ್ ಹೂಡಾ, ಅಕ್ಷರ್ ಪಟೇಲ್, ಯಜುಯೇಂದ್ರ ಚಾಹಲ್ ತಲಾ ಒಂದು ವಿಕೆಟ್ ಪಡೆದರು.

312 ರನ್ ಗೆಲುವಿನ ಗುರಿ ಬೆನ್ನತ್ತಿದ ಭಾರತ 49.4 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿತು. ಶಿಖರ್ ಧವನ್ 13, ಶುಭ ಮನ್ ಗಿಲ್ 43, ಶ್ರೇಯಸ್ ಅಯ್ಯರ್ 63, ಸೂರ್ಯಕುಮಾರ ಯಾದವ್ 9, ಸಂಜು ಸ್ಯಾಮ್ಸನ್ 54, ದೀಪಕ್ ಹೂಡ 33, ಅಕ್ಷರ್ ಪಟೇಲ್ ಅಜೇಯ 64 ರನ್ ಗಳಿಸಿದರು. ವಿಂಡೀಸ್ ಪರವಾಗಿ ಅಲ್ಜಾರಿ ಜೋಸೆಫ್ 2ಡು ಕೈಲ್ ಮೇಯರ್ 2 ವಿಕೆಟ್ ಪಡೆದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...