
ಭಾರತ ಮತ್ತು ಇಂಗ್ಲೆಂಡ್ ನಡುವೆ ಶುಕ್ರವಾರ ನಡೆದ ಮೊದಲ ಟಿ20ಯಲ್ಲಿ ವೇಗದ ಎಸೆತಕ್ಕೆ ರಿಷಬ್ ಪಂತ್ ಹೊಡೆದ ಸಿಕ್ಸರ್ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚಾ ವಿಷಯವಾಗಿದೆ. ಟ್ವೀಟರ್ ನಲ್ಲಿ ಈ ಸಿಕ್ಸರ್ ಬಗ್ಗೆ ಕ್ರಿಕೆಟರ್‌ಗಳು, ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುವಂತೆ ಮಾಡಿದೆ.
ಆರ್ಚರ್ ಅವರ ಎಕ್ಸ್‌ಪ್ರೆಸ್ ವೇಗದ ಎಸೆತವನ್ನು ರಿಷಬ್ ಪಂತ್ ವಿಚಿತ್ರ ಭಂಗಿಯಲ್ಲಿ ಬೌಂಡರಿ ಲೈನ್ ಆಚೆಗೆ ಕಳಿಸಿದ್ದರು. ಲೆಗ್ ಸ್ಟೆಂಪ್‌ನಲ್ಲಿ ಮೊಣಕಾಲಿನ ಹಂತದಿಂದ ಇಳಿದು ಬಂದ ಚೆಂಡನ್ನು ವಿಕೆಟ್ ಹಿಂಭಾಗ ಬೌಂಡರಿ ದಾಟುವಂತೆ ದಾರಿ ತೋರಿಸಿದ್ದರು.
ಇಂದು 2ನೇ ಟಿ20: ಸೇಡು ತೀರಿಸಿಕೊಳ್ಳುವ ತವಕದಲ್ಲಿ ಟೀಂ ಇಂಡಿಯಾ
ಅಹ್ಮದಾಬಾದ್‌ನ ಇದೇ ಪಿಚ್‌ನಲ್ಲಿ ಅವರು ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಜೇಮ್ಸ್ ಆಂಡರ್ಸನ್ ಬೌಲಿಂಗ್ ನಲ್ಲಿ ಇದೇ ರೀತಿಯ ಹೊಡೆತವನ್ನು ಪಂತ್ ಬಾರಿಸಿದ್ದರು.
https://twitter.com/KP24/status/1370371892440297474?ref_src=twsrc%5Etfw%7Ctwcamp%5Etweetembed%7Ctwterm%5E1370371892440297474%7Ctwgr%5E%7Ctwcon%5Es1_&ref_url=https%3A%2F%2Fsports.ndtv.com%2Findia-vs-england-2020-21%2Find-vs-eng-rishabh-pant-plays-astonishing-reverse-scoop-off-jofra-archer-watch-2389564