alex Certify ಟೀಂ ಇಂಡಿಯಾ ಆಟಗಾರನನ್ನು ನಾಯಿಗೆ ಹೋಲಿಸಿದ ಕಂಗನಾ.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾ ಆಟಗಾರನನ್ನು ನಾಯಿಗೆ ಹೋಲಿಸಿದ ಕಂಗನಾ.​..!

ಪಾಪ್​ ಸಿಂಗರ್​ ರಿಹನ್ನಾ ಹಾಗೂ ಕ್ಲೈಮೇಟ್​ ಆಕ್ಟಿವಿಸ್ಟ್​ ಗ್ರೆಟಾ ಥನ್​ಬರ್ಗ್​ ರೈತ ಪ್ರತಿಭಟನೆ ಬಗ್ಗೆ ಧ್ವನಿ ಎತ್ತಿದ್ದೇ ತಡ ಭಾರತದ ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಒಗ್ಗಟ್ಟಿನ ಸಂದೇಶವನ್ನ ಸಾರುತ್ತಿದ್ದಾರೆ. ಈ ಅಭಿಯಾನಕ್ಕೆ ಸ್ಟಾರ್​ ಕ್ರಿಕೆಟಿಗರೂ ಸಾಥ್​ ನೀಡಿದ್ದು ಸಚಿನ್ ತೆಂಡೂಲ್ಕರ್​, ಅನಿಲ್​ ಕುಂಬ್ಳೆ, ಕೊಹ್ಲಿ, ರಹಾನೆ, ರೋಹಿತ್​ ಶರ್ಮಾ ಸೇರಿದಂತೆ ಅನೇಕರು ನಾವೆಲ್ಲ ಒಂದಾಗಿದ್ದೇವೆ ಎಂಬ ಮೆಸೇಜ್​ ನೀಡಿದ್ದಾರೆ.

ಆದರೆ ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುವ ನಟಿ ಕಂಗನಾ ರಣಾವತ್​ ಕ್ರಿಕೆಟಿಗರ ಟ್ವೀಟ್​ಗೂ ವಿವಾದಿತ ರಿ ಟ್ವೀಟ್​ ಮಾಡಿದ್ದಾರೆ. ಟೀಂ ಇಂಡಿಯಾ ಆಟಗಾರ ರೋಹಿತ್​ ಶರ್ಮಾ ರೈತರ ಪ್ರತಿಭಟನೆ ವಿಚಾರವಾಗಿ ಟ್ವಿಟರ್​ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಒಗ್ಗಟ್ಟಾಗಿ ಇದ್ದಾಗ ಪ್ರತಿಬಾರಿಯೂ ಭಾರತ ಬಲಿಷ್ಠ ರಾಷ್ಟ್ರ ಎಂದು ತೋರಿಸಿಕೊಂಡಿದೆ. ನಮ್ಮ ದೇಶದಲ್ಲಿ ರೈತರ ಪಾತ್ರ ಪ್ರಮುಖವಾಗಿದೆ. ಎಲ್ಲರೂ ತಮ್ಮ ಪಾತ್ರದ ಮೂಲಕ ಈ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ ಎಂದು ಬರೆದುಕೊಂಡಿದ್ದರು.

ಆದರೆ ಈ ಟ್ವೀಟ್​​ಗೆ ಪ್ರತಿಕ್ರಿಯಿಸಿದ ನಟಿ ಕಂಗನಾ ರಣಾವತ್​​, ರೋಹಿತ್​ ಶರ್ಮಾರನ್ನ ಅಗಸನ ನಾಯಿ ಎಂದು ಜರಿದಿದ್ದಾರೆ. ಯಾಕೆ ಈ ಭಾರತೀಯ ಕ್ರಿಕೆಟಿಗರು ಅಗಸನ ನಾಯಿಯಂತೆ ಆಡುತ್ತಾರೆ..? ಮನೆಗೂ ಉಪಯೋಗವಿಲ್ಲ…..ಹೊರಗಡೆಯೂ ಪ್ರಯೋಜನಕ್ಕೆ ಬರೋದಿಲ್ಲ. ರೈತರ ಒಳಿತಿಗಾಗಿಯೇ ಮಾಡಿರುವ ಕಾನೂನನ್ನ ಅವರೇಕೆ ವಿರೋಧಿಸ್ತಾರೆ..? ಈ ಉಗ್ರರು ದೇಶದಲ್ಲಿ ಶಾಂತಿ ಕದಡುತ್ತಿದ್ದಾರೆ. ಇದನ್ನೆಲ್ಲ ಹೇಳಬೇಕು ನೀವು…..ಯಾಕೆ ಅಷ್ಟೊಂದು ಭಯಾನಾ..? ಎಂದು ಟ್ವೀಟ್​ ಮಾಡಿದ್ದಾರೆ.

ಆದರೆ ಈ ಟ್ವೀಟ್​ನ್ನು ಟ್ವಿಟರ್ ಇಂಡಿಯಾ ಅಳಿಸಿ ಹಾಕಿದೆ. ಇದು ಮಾತ್ರವಲ್ಲದೇ ಬಾಲಿವುಡ್​ ನಟಿ ತಾಪ್ಸಿ ಪನ್ನು ವಿರುದ್ಧ ಕಂಗನಾ ಮಾಡಿದ್ದ ಟ್ವೀಟ್​ನ್ನೂ ಡಿಲೀಟ್​ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...