
ಆದರೆ ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುವ ನಟಿ ಕಂಗನಾ ರಣಾವತ್ ಕ್ರಿಕೆಟಿಗರ ಟ್ವೀಟ್ಗೂ ವಿವಾದಿತ ರಿ ಟ್ವೀಟ್ ಮಾಡಿದ್ದಾರೆ. ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ರೈತರ ಪ್ರತಿಭಟನೆ ವಿಚಾರವಾಗಿ ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಒಗ್ಗಟ್ಟಾಗಿ ಇದ್ದಾಗ ಪ್ರತಿಬಾರಿಯೂ ಭಾರತ ಬಲಿಷ್ಠ ರಾಷ್ಟ್ರ ಎಂದು ತೋರಿಸಿಕೊಂಡಿದೆ. ನಮ್ಮ ದೇಶದಲ್ಲಿ ರೈತರ ಪಾತ್ರ ಪ್ರಮುಖವಾಗಿದೆ. ಎಲ್ಲರೂ ತಮ್ಮ ಪಾತ್ರದ ಮೂಲಕ ಈ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ ಎಂದು ಬರೆದುಕೊಂಡಿದ್ದರು.
ಆದರೆ ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ನಟಿ ಕಂಗನಾ ರಣಾವತ್, ರೋಹಿತ್ ಶರ್ಮಾರನ್ನ ಅಗಸನ ನಾಯಿ ಎಂದು ಜರಿದಿದ್ದಾರೆ. ಯಾಕೆ ಈ ಭಾರತೀಯ ಕ್ರಿಕೆಟಿಗರು ಅಗಸನ ನಾಯಿಯಂತೆ ಆಡುತ್ತಾರೆ..? ಮನೆಗೂ ಉಪಯೋಗವಿಲ್ಲ…..ಹೊರಗಡೆಯೂ ಪ್ರಯೋಜನಕ್ಕೆ ಬರೋದಿಲ್ಲ. ರೈತರ ಒಳಿತಿಗಾಗಿಯೇ ಮಾಡಿರುವ ಕಾನೂನನ್ನ ಅವರೇಕೆ ವಿರೋಧಿಸ್ತಾರೆ..? ಈ ಉಗ್ರರು ದೇಶದಲ್ಲಿ ಶಾಂತಿ ಕದಡುತ್ತಿದ್ದಾರೆ. ಇದನ್ನೆಲ್ಲ ಹೇಳಬೇಕು ನೀವು…..ಯಾಕೆ ಅಷ್ಟೊಂದು ಭಯಾನಾ..? ಎಂದು ಟ್ವೀಟ್ ಮಾಡಿದ್ದಾರೆ.
ಆದರೆ ಈ ಟ್ವೀಟ್ನ್ನು ಟ್ವಿಟರ್ ಇಂಡಿಯಾ ಅಳಿಸಿ ಹಾಕಿದೆ. ಇದು ಮಾತ್ರವಲ್ಲದೇ ಬಾಲಿವುಡ್ ನಟಿ ತಾಪ್ಸಿ ಪನ್ನು ವಿರುದ್ಧ ಕಂಗನಾ ಮಾಡಿದ್ದ ಟ್ವೀಟ್ನ್ನೂ ಡಿಲೀಟ್ ಮಾಡಿದೆ.