alex Certify ಸಂಜು ಸ್ಯಾಮ್ಸನ್​ಗೆ ಹರ್ಭಜನ್​ ಸಿಂಗ್​ ಕಿವಿಮಾತು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಜು ಸ್ಯಾಮ್ಸನ್​ಗೆ ಹರ್ಭಜನ್​ ಸಿಂಗ್​ ಕಿವಿಮಾತು..!

ಟೀಂ ಇಂಡಿಯಾ ಆಟಗಾರ ಸಂಜು ಸ್ಯಾಮ್ಸನ್​ಗೆ ಹರ್ಭಜನ್​ ಸಿಂಗ್​​ ಮುಖ್ಯವಾದ ಸಲಹೆಯೊಂದನ್ನ ನೀಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟಿ 20 ಸರಣಿಯಲ್ಲಿ ಸ್ಯಾಮ್ಸನ್​ ಎಲ್ಲಾ ಪಂದ್ಯಗಳನ್ನ ಆಡಿದ್ದರೂ ಸಹ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ರು. ಮೊದಲ ಮ್ಯಾಚ್​ನಲ್ಲಿ 23, 2 ನೇ ಪಂದ್ಯದಲ್ಲಿ 15 ಹಾಗೂ ಮೂರನೇ ಪಂದ್ಯದಲ್ಲಿ ಕೇವಲ 10 ರನ್​ಗಳನ್ನ ಗಳಿಸಲಷ್ಟೇ ಶಕ್ತರಾದರು.

ಸಂಜುಗೆ ಟೀಂ ಇಂಡಿಯಾದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಟವಾಡುವ ಅವಕಾಶ ಸಿಕ್ಕಿದೆ. ಇದು ಬಹುಶಃ ಸ್ಯಾಮ್ಸನ್​ರ ಮೊದಲ ಅಥವಾ ಎರಡನೇ ಪ್ರವಾಸವಿದ್ದಿರಬಹುದು. ಇವರೆಲ್ಲ ಟೀಂ ಇಂಡಿಯಾದ ಭವಿಷ್ಯದ ಸ್ಟಾರ್​ ಆಟಗಾರರು. ತಪ್ಪನ್ನೇ ಮಾಡದೇ ಏನನ್ನೂ ಕಲಿಯೋಕೆ ಸಾಧ್ಯವಿಲ್ಲ. ಸಂಜು ಸ್ಯಾಮ್ಸನ್​ಗೆ ಉತ್ತಮ ಆಟಗಾರನಾಗುವ ಎಲ್ಲಾ ಸಾಮರ್ಥ್ಯವಿದೆ ಎಂಬ ನಂಬಿಕೆ ನನಗಿದೆ. ಆದರೆ, ಮುಂದಿನ ಸರಣಿಯಲ್ಲೂ ಸ್ಯಾಮ್ಸನ್​ ಇದೇ ಆಟ ಮುಂದುವರಿಸಿದ್ರೆ ತಮ್ಮ ಸ್ಥಾನವನ್ನ ಕಳೆದುಕೊಳ್ಳುವ ಸಾಧ್ಯತೆ ಇದೆ ಅಂತಾ ಹರ್ಭಜನ್​ ಸಿಂಗ್​ ಹೇಳಿದ್ದಾರೆ.
ಯಾವುದೇ ತಂಡದಲ್ಲಿ ನಾಲ್ಕನೇ ಸ್ಥಾನ ಅನ್ನೋದು ಬಹಳ ಮುಖ್ಯವಾದ ಸ್ಲೋಟ್​ ಆಗಿದೆ. ಹೀಗಾಗಿ ಇಂತಹ ಅವಕಾಶ ಸಿಕ್ಕಾಗ ಅದನ್ನ ಚೆನ್ನಾಗಿ ಬಳಸಿಕೊಳ್ಳೋದನ್ನ ಕಲಿತುಕೊಳ್ಳಬೇಕು ಅಂತಾ ಕಿವಿಮಾತು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...