ಟೀಂ ಇಂಡಿಯಾ ಆಟಗಾರ ಸಂಜು ಸ್ಯಾಮ್ಸನ್ಗೆ ಹರ್ಭಜನ್ ಸಿಂಗ್ ಮುಖ್ಯವಾದ ಸಲಹೆಯೊಂದನ್ನ ನೀಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟಿ 20 ಸರಣಿಯಲ್ಲಿ ಸ್ಯಾಮ್ಸನ್ ಎಲ್ಲಾ ಪಂದ್ಯಗಳನ್ನ ಆಡಿದ್ದರೂ ಸಹ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ರು. ಮೊದಲ ಮ್ಯಾಚ್ನಲ್ಲಿ 23, 2 ನೇ ಪಂದ್ಯದಲ್ಲಿ 15 ಹಾಗೂ ಮೂರನೇ ಪಂದ್ಯದಲ್ಲಿ ಕೇವಲ 10 ರನ್ಗಳನ್ನ ಗಳಿಸಲಷ್ಟೇ ಶಕ್ತರಾದರು.
ಸಂಜುಗೆ ಟೀಂ ಇಂಡಿಯಾದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಟವಾಡುವ ಅವಕಾಶ ಸಿಕ್ಕಿದೆ. ಇದು ಬಹುಶಃ ಸ್ಯಾಮ್ಸನ್ರ ಮೊದಲ ಅಥವಾ ಎರಡನೇ ಪ್ರವಾಸವಿದ್ದಿರಬಹುದು. ಇವರೆಲ್ಲ ಟೀಂ ಇಂಡಿಯಾದ ಭವಿಷ್ಯದ ಸ್ಟಾರ್ ಆಟಗಾರರು. ತಪ್ಪನ್ನೇ ಮಾಡದೇ ಏನನ್ನೂ ಕಲಿಯೋಕೆ ಸಾಧ್ಯವಿಲ್ಲ. ಸಂಜು ಸ್ಯಾಮ್ಸನ್ಗೆ ಉತ್ತಮ ಆಟಗಾರನಾಗುವ ಎಲ್ಲಾ ಸಾಮರ್ಥ್ಯವಿದೆ ಎಂಬ ನಂಬಿಕೆ ನನಗಿದೆ. ಆದರೆ, ಮುಂದಿನ ಸರಣಿಯಲ್ಲೂ ಸ್ಯಾಮ್ಸನ್ ಇದೇ ಆಟ ಮುಂದುವರಿಸಿದ್ರೆ ತಮ್ಮ ಸ್ಥಾನವನ್ನ ಕಳೆದುಕೊಳ್ಳುವ ಸಾಧ್ಯತೆ ಇದೆ ಅಂತಾ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಯಾವುದೇ ತಂಡದಲ್ಲಿ ನಾಲ್ಕನೇ ಸ್ಥಾನ ಅನ್ನೋದು ಬಹಳ ಮುಖ್ಯವಾದ ಸ್ಲೋಟ್ ಆಗಿದೆ. ಹೀಗಾಗಿ ಇಂತಹ ಅವಕಾಶ ಸಿಕ್ಕಾಗ ಅದನ್ನ ಚೆನ್ನಾಗಿ ಬಳಸಿಕೊಳ್ಳೋದನ್ನ ಕಲಿತುಕೊಳ್ಳಬೇಕು ಅಂತಾ ಕಿವಿಮಾತು ಹೇಳಿದ್ದಾರೆ.