ಟೆಸ್ಟ್ ಬ್ಯಾಟ್ಸಮನ್ಗಳ ಐಸಿಸಿ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಡಿಲೇಡ್ನಲ್ಲಿ ನಡೆದ ಮೊದಲ ಇನ್ನಿಂಗ್ಸ್ನಲ್ಲಿ 74 ರನ್ಗಳನ್ನ ಗಳಿಸುವ ಮೂಲಕ ಅಗ್ರ ಶ್ರೇಯಾಂಕಿತ ಬ್ಯಾಟ್ಸಮನ್ ಸ್ಟೀವ್ ಸ್ಮಿತ್ರ ದಾಖಲೆಯನ್ನ ಸರಿಗಟ್ಟುವತ್ತ ದಾಪುಗಾಲು ಇಡುತ್ತಿದ್ದಾರೆ.
ಅಡಿಲೇಡ್ ಅಂಗಳದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಅತ್ಯಂತ ಕಳಪೆ ಪ್ರದರ್ಶನದ ಹೊರತಾಗಿಯೂ ನಾಯಕ ಕೊಹ್ಲಿ ಅರ್ಧ ಶತಕದ ಮೂಲಕ 888 ಪಾಯಿಂಟ್ ತಲುಪಿದ್ದಾರೆ.
ಆದರೆ ಎರಡೂ ಇನ್ನಿಂಗ್ಸ್ಗಳಲ್ಲಿ ಕೇವಲ 2 ರನ್ಗಳನ್ನ ಗಳಿಸಲಷ್ಟೇ ಶಕ್ತರಾದ ಸ್ಮಿತ್ 10 ಅಂಕಗಳನ್ನ ಕಳೆದುಕೊಂಡು 901 ಅಂಕಗಳನ್ನ ಉಳಿಸಿಕೊಂಡಿದ್ದಾರೆ. ಈ ಹಿಂದೆ ಇವರಿಬ್ಬರ ನಡುವೆ 25 ಅಂಕಗಳ ಅಂತರವಿತ್ತು. ಆದರೆ ಈಗ ಇಬ್ಬರ ನಡುವಿನ ಅಂತರ 13ಕ್ಕೆ ಬಂದಿಳಿದಿದೆ.