ಇದೇ ಮೊದಲ ಬಾರಿಗೆ ಕೃತಕ ಕಾಲುಗಳ ಮೇಲೆ ನಡೆಯುತ್ತಿರುವ ಎರಡು ವರ್ಷದ ಮಗುವೊಂದಕ್ಕೆ ಪ್ರೋತ್ಸಾಹ ನೀಡುತ್ತಿರುವ ಪ್ಯಾರಾಲಿಂಪಿಕ್ ಪಟು ಬ್ಲೇಕ್ ಲೀಪ್ರ ವಿಡಿಯೋವೊಂದು ನೆಟ್ಟಿಗರ ಹೃದಯ ಗೆದ್ದಿದೆ.
ಬ್ಯಾಸ್ಕೆಟ್ಬಾಲ್ ಮಾಜಿ ಆಟಗಾರ ರೆಕ್ಸ್ ಚಾಪ್ಮನ್ ಈ ವಿಡಿಯೋವನ್ನು ಟ್ವಿಟರ್ನಲ್ಲಿರುವ ತಮ್ಮ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಕೆ.ಜೆ. ಡೈಯೆರ್ ಹೆಸರಿನ ಈ ಎರಡರ ಪೋರನಿಗೆ ಪ್ಯಾರಾಲಿಂಪಿಕ್ನಲ್ಲಿ ಎಂಟು ಪದಕ ಗೆದ್ದಿರುವ ಚಾಂಪಿಯನ್ ಪ್ರೋತ್ಸಾಹ ನೀಡುತ್ತಿರುವುದನ್ನು ನೋಡಬಹುದಾಗಿದೆ.
ಈ ವಿಡಿಯೋ ಸಖತ್ ವೈರಲ್ ಆಗಿದ್ದು, 20 ಲಕ್ಷಕ್ಕೂ ಹೆಚ್ಚು ಬಾರಿ ವೀವ್ ಆಗಿದೆ. ಬ್ಲೇಕ್ರ ಹೃದಯ ಸಿರಿವಂತಿಕೆಯನ್ನು ನೆಟ್ಟಿಗರು ಮೆಚ್ಚಿ ಕೊಂಡಾಡಿದ್ದಾರೆ.