alex Certify ಶೆಫ್​ ಆಗಿ ಬದಲಾದ್ರು ಟೀಂ ಇಂಡಿಯಾ ಆಟಗಾರ ಹಾರ್ದಿಕ್​ ಪಾಂಡ್ಯಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೆಫ್​ ಆಗಿ ಬದಲಾದ್ರು ಟೀಂ ಇಂಡಿಯಾ ಆಟಗಾರ ಹಾರ್ದಿಕ್​ ಪಾಂಡ್ಯಾ..!

ಆಟಗಾರರಲ್ಲೇ ಕೋವಿಡ್ ಸೋಂಕು ಕಂಡು ಬಂದ ಹಿನ್ನೆಲೆ ಈ ವರ್ಷದ ಇಂಡಿಯನ್​ ಪ್ರೀಮಿಯರ್​ ಲೀಗ್ ಪಂದ್ಯ ಕೂಡ ಅನಿರ್ದಿಷ್ಟಾವಧಿಗೆ ರದ್ದಾಗಿದೆ. ಹೀಗಾಗಿ ಕ್ರಿಕೆಟ್​ ಆಟಗಾರರು ಮನೆಗೆ ಹಿಂದಿರುಗಿದ್ದು ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ.

ಸೋಶಿಯಲ್​ ಮೀಡಿಯಾದ ವಿವಿಧ ವೇದಿಕೆಗಳ ಮೂಲಕ ತಮ್ಮನ್ನ ತಾವು ಬ್ಯುಸಿಯಾಗಿ ಇಟ್ಟುಕೊಂಡಿದ್ದಾರೆ. ಇದೇ ರೀತಿ ಟೀಂ ಇಂಡಿಯಾ ಆಟಗಾರ ಹಾರ್ದಿಕ್​ ಪಾಂಡ್ಯ ಕೂಡ ಇನ್​ಸ್ಟಾಗ್ರಾಂನಲ್ಲಿ ಇಂಟರೆಸ್ಟಿಂಗ್​ ಸ್ಟೋರಿಯೊಂದನ್ನ ಶೇರ್​ ಮಾಡಿದ್ದಾರೆ.

ನೀವೇನಾದರೂ ಹಾರ್ದಿಕ್​ ಪಾಂಡ್ಯಾರನ್ನ ಸೋಶಿಯಲ್​ ಮೀಡಿಯಾದಲ್ಲಿ ಫಾಲೋ ಮಾಡ್ತಿದ್ದೀರಾ ಅನ್ನೋದಾದರೆ ಇವರು ಯಾವೆಲ್ಲ ರೀತಿಯಲ್ಲಿ ಮನರಂಜನೆ ಕೊಡ್ತಾರೆ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಯಾವಾಗಲೂ ತಮ್ಮ ಪತ್ನಿ ನತಾಶಾ ಹಾಗೂ ಪುತ್ರ ಅಗಸ್ತ್ಯರ ಫೊಟೋಗಳನ್ನ ಶೇರ್​ ಮಾಡುತ್ತಲೇ ಇರುವ ಹಾರ್ದಿಕ್​ ಈ ಬಾರಿ ಕೂಡ ವಿಶೇಷ ಸ್ಟೋರಿಯನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

IPL ರದ್ದಾಗ್ತಿದ್ದಂತೆ ಹೊರ ಬಿತ್ತು ಶಾಕಿಂಗ್ ಸುದ್ದಿ: ದೆಹಲಿ ಪೊಲೀಸರಿಂದ ಇಬ್ಬರು ಅರೆಸ್ಟ್

ಕೆಲ ದಿನಗಳ ಹಿಂದಷ್ಟೇ ಹಾರ್ದಿಕ್​ ತಮ್ಮ ಅತ್ತಿಗೆ ಪಂಖುರಿ ಶರ್ಮಾ ಶೇರ್​ ಮಾಡಿದ ಪೋಸ್ಟ್​ನ್ನು ತಮ್ಮ ಇನ್​ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ರು. ಇದರಲ್ಲಿ ಹಾರ್ದಿಕ್​ ಪಾಂಡ್ಯ ತಲೆಗೆ ಟೊಪ್ಪಿ ಧರಿಸಿ ಬಾಣಸಿಗನಂತೆ ಅಡುಗೆ ಮನೆಯಲ್ಲಿ ನ್ಯೂಡಲ್ಸ್ ಮಾಡ್ತಿರೋದನ್ನ ನೋಡಬಹುದಾಗಿದೆ.ಇದನ್ನ ಕೃನಾಲ್ ಪಾಂಡ್ಯ ಪತ್ನಿ ಪಂಖುರಿ ಶೇರ್​ ಮಾಡಿದ್ದರು.

ಇದಕ್ಕೂ ಮೊದಲು ಹಾರ್ದಿಕ್​ ಪಾಂಡ್ಯ ತಮ್ಮ 8 ತಿಂಗಳ ಮಗ ಅಗಸ್ತ್ಯಗೆ ಊಟ ಮಾಡಿಸುತ್ತಿದ್ದ ವಿಡಿಯೋ ಶೇರ್​ ಮಾಡಿದ್ದರು. ಈ ಸಣ್ಣ ವಿಡಿಯೋದಲ್ಲಿ ಹಾರ್ದಿಕ್​ ತಮ್ಮ ತಟ್ಟೆಯಲ್ಲಿದ್ದ ಆಹಾರವನ್ನ ಅಗಸ್ತ್ಯಗೆ ತಿನ್ನಿಸುತ್ತಿದ್ದನ್ನ ಕಾಣಬಹುದಾಗಿದೆ. ಈ ಎಲ್ಲಾ ವಿಡಿಯೋ ಹಾಗೂ ಸ್ಟೋರಿಗಳು ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...