alex Certify IPL ರದ್ದಾಗ್ತಿದ್ದಂತೆ ಹೊರ ಬಿತ್ತು ಶಾಕಿಂಗ್ ಸುದ್ದಿ: ದೆಹಲಿ ಪೊಲೀಸರಿಂದ ಇಬ್ಬರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IPL ರದ್ದಾಗ್ತಿದ್ದಂತೆ ಹೊರ ಬಿತ್ತು ಶಾಕಿಂಗ್ ಸುದ್ದಿ: ದೆಹಲಿ ಪೊಲೀಸರಿಂದ ಇಬ್ಬರು ಅರೆಸ್ಟ್

ಐಪಿಎಲ್ ಪ್ರೇಮಿಗಳಿಗೆ ಕೊರೊನಾ ನಿರಾಸೆ ಮೂಡಿಸಿದೆ. ಐಪಿಎಲ್ ಆಟಗಾರರಿಗೆ ಕೊರೊನಾ ಕಾಣಿಸಿಕೊಳ್ತಿದ್ದಂತೆ ಐಪಿಎಲ್ ಪಂದ್ಯಗಳನ್ನು ರದ್ದು ಮಾಡಲಾಗಿದೆ. ಬಿಸಿಸಿಐ ನಿನ್ನೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಡಿಸಿದೆ. ಮನೆಯಲ್ಲಿಯೇ ಐಪಿಎಲ್ ವೀಕ್ಷಣೆ ಮಾಡ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರವಾಗಿದೆ.

ಐಪಿಎಲ್ ಆಟಗಾರರಿಗೆ ರಕ್ಷಣೆ ನೀಡಲು ಬಯೋ ಬಬಲ್ ನಿರ್ಮಾಣ ಮಾಡಲಾಗಿತ್ತು. ಆದ್ರೆ ಬಯೋ ಬಬಲ್ ನಲ್ಲಿ ಕೊರೊನಾ ಹೇಗೆ ಬಂತು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಇದ್ರ ಮಧ್ಯೆ ದೆಹಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ವೇಳೆ ಮೈದಾನಕ್ಕೆ ಪ್ರವೇಶಿಸಲು ಯತ್ನಿಸಿದ್ದಾರೆ ಎಂಬ ಆರೋಪವಿದೆ. ಈ ಇಬ್ಬರೂ ನಕಲಿ ಮಾನ್ಯತೆಯನ್ನು ಹೊಂದಿದ್ದರಂತೆ. ಇಬ್ಬರನ್ನೂ ಬಂಧಿಸಿ 5 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಎಎನ್‌ಐ ವರದಿ ಪ್ರಕಾರ, ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ವೇಳೆ ಇಬ್ಬರು ಬುಕ್ಕಿಗಳನ್ನು ಬಂಧಿಸಲಾಗಿದೆ. ಇವರಿಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...