alex Certify ಸೀರೆಯಲ್ಲಿ ಪಲ್ಟಿ ಒಡೆದು ಬೆಕ್ಕಸಬೆರಗಾಗಿಸಿದ ನಾರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀರೆಯಲ್ಲಿ ಪಲ್ಟಿ ಒಡೆದು ಬೆಕ್ಕಸಬೆರಗಾಗಿಸಿದ ನಾರಿ….!

ಸೀರೆಯುಟ್ಟರೆ ಹಲವು ನಾರಿಯರಿಗೆ ಸರಿಯಾಗಿ ನಡೆಯುವುದೂ ಕಷ್ಟ ಅಂಥದ್ದರಲ್ಲಿ ಜಿಮ್ನಾಸ್ಟಿಕ್ ಪಟುವೊಬ್ಬರು ಸೀರೆಯುಟ್ಟು ಪಲ್ಟಿ ಹೊಡೆದು ಸ್ಟಂಟ್ ಮಾಡುವ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಇನ್ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಆಗಿರುವ ವಿಡಿಯೋವನ್ನು 7.62ಲಕ್ಷ ಜನ ಲೈಕ್ ಮಾಡಿದ್ದಾರೆ. 3310 ಜನ ಕಮೆಂಟ್ ಮಾಡಿದ್ದಾರೆ.

ಜಿಮ್ನಾಸ್ಟಿಕ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಬಂಗಾರದ ಪದಕ ವಿಜೇತೆಯಾದ ಪಾರುಲ್ ಅರೋರಾ ತಮ್ಮ ಇನ್‌ಸ್ಟಾ ಖಾತೆಯಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ಕಪ್ಪು ಬಣ್ಣದ ತೋಳು ರಹಿತ ಬ್ಲೌಸ್ ಹಾಗೂ ತಿಳಿ ನೀಲಿ ಸೀರೆಯುಟ್ಟ ಆಕೆ ದೊಡ್ಡ ಮೈದಾನದಲ್ಲಿ ಮೂರು ಪಲ್ಟಿ ಹೊಡೆಯುವ ದೃಶ್ಯ ವಿಡಿಯೋದಲ್ಲಿದೆ.

‘ಸೀರೆಯಲ್ಲಿ ಖತರನಾಖ್ ಸ್ಟಂಟ್’ ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ. ನೆಟ್ಟಿಗರು ವಿಡಿಯೋ ನೋಡಿ ಅಚ್ಚರಿಪಟ್ಟಿದ್ದಾರೆ. ಪಾರುಲ್ ಅವರ ಚಾಕಚಕ್ಯತೆಗೆ ಸೈ ಎಂದಿದ್ದಾರೆ. ಸೂಪರ್, ಅಮೆಂಜಿಗ್ ಎಂದು ಕಮೆಂಟ್ ಮಾಡಿ ಅವರನ್ನು ಹುರಿದುಂಬಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...