alex Certify ಗೇಮರ್ ಗಳಿಗೆ ಗುಡ್ ನ್ಯೂಸ್: FAUG ರಿಲೀಸ್‌ ಗೆ ಡೇಟ್‌ ಫಿಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೇಮರ್ ಗಳಿಗೆ ಗುಡ್ ನ್ಯೂಸ್: FAUG ರಿಲೀಸ್‌ ಗೆ ಡೇಟ್‌ ಫಿಕ್ಸ್

ಲಕ್ಷಾಂತರ ಮೊಬೈಲ್ ಗೇಮರ್ ಗಳಿಗೆ ಇಲ್ಲಿದೆ ಸಿಹಿ ಸುದ್ದಿ. FAU-G ಗೇಮ್ ಶೀಘ್ರದಲ್ಲಿ ಲಾಂಚ್ ಆಗಲಿದೆ. ಫಿಯರ್ ಲೆಸ್ ಆ್ಯಂಡ್ ಯುನೈಟೆಡ್ ಗಾರ್ಡ್ಸ್ ಎಂಬುದು ಈ ಮೊಬೈಲ್ ಆಟದ ಪೂರ್ಣ ಹೆಸರಾಗಿದೆ.

ಗೇಮ್ ನ ಆ್ಯಂಥಮ್ ಸಾಂಗ್ ನ್ನು ಇನ್ಸ್ಟಾಗ್ರಾಂನಲ್ಲಿ ಭಾನುವಾರ ಬಿಡುಗಡೆ ಮಾಡಲಾಗಿದೆ. ಪ್ರಸಿದ್ಧ ಬಾಲಿವುಡ್ ಹಿನ್ನೆಲೆ ಗಾಯಕ ಸುಖವೀಂದರ್ ಸಿಂಗ್ ಈ ಗೇಮ್ ನ ಹಾಡು ಹಾಡಿದ್ದಾರೆ.‌ ಖ್ಯಾತ ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಗೇಮ್ ನ ಅಂಬಾಸಿಡರ್ ಆಗಿದ್ದಾರೆ. ಗೇಮ್ ನ್ನು ಭಯ ರಹಿತ ಹಾಗೂ ಸಂಘಟಿತ ರಕ್ಷಕರಿಗೆ ಸಮರ್ಪಿಸಲಾಗಿದೆ.

ಸಂಭಾವ್ಯ ದಾಳಿಯಿಂದ ಗಡಿಯನ್ನ ರಕ್ಷಿಸುವ ಅಂಶವನ್ನು ಈ ಗೇಮ್ ಒಳಗೊಂಡಿದ್ದು, ಜನವರಿ 26 ರಂದು ಬಿಡುಗಡೆಯಾಗಲಿದೆ. ಅಕ್ಷಯ್ ಕುಮಾರ್ ಅವರು ಗೇಮ್ ನ ನೋಂದಣಿ‌ ಲಿಂಕ್ ನ್ನು ಅಪ್ ಲೋಡ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...