
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಪಂದ್ಯವೊಂದರ ವೇಳೆ ಅಸಭ್ಯ ಭಾಷೆಯಲ್ಲಿ ಮಾತನಾಡಿದ ಕಾರಣಕ್ಕೆ ಪಂದ್ಯದ ಶುಲ್ಕದ ಶೇ.35ರಷ್ಟನ್ನು ದಂಡದ ರೂಪದಲ್ಲಿ ಕಡಿತ ಮಾಡಲಾಗುತ್ತಿದೆ.
ಇಲ್ಲಿನ ಸಿಂಧ್ ಪ್ರಾಂತ್ಯದ ತಂಡ ನಾಯಕರಾದ ಸರ್ಫರಾಜ್ ಅಹ್ಮದ್, ಕಾಯಿಡ್-ಎ-ಆಜಾಮ್ ಟ್ರೋಫಿಗೆ ಆಡುತ್ತಿರುವ ಟೂರ್ನಿಯ ಪಂದ್ಯವೊಂದರ ವೇಳೆ ಅಂಪೈರ್‌ಗಳ ವಿರುದ್ಧ ಅಸಮಾಧಾನ ತೋಡಿಕೊಳ್ಳುವ ವೇಳೆ ಪದೇ ಪದೇ ಅಸಹನೀಯವಾದ ಕಾಮೆಂಟ್‌ಗಳ್ನು ಮಾಡಿದ ಆಪಾದನೆ ಎದುರಿಸುತ್ತಿದ್ದಾರೆ.
ಈ ಘಟನೆಯಲ್ಲಿ ಪಂದ್ಯದ ಅಂಪೈರ್‌ಗಳಾದ ಫೈಸಲ್ ಅಫ್ರಿದಿ ಹಾಗೂ ಸಾಕಿಬ್ ಖಾನ್ ವರದಿ ಮಾಡಿದ್ದು, ಆಟದ ಮೈದಾನದಲ್ಲಿ ಆಟಗಾರರು ವರ್ತಿಸಬೇಕಾದ ನಿಯಮಾವಳಿಯ ಉಲ್ಲಂಘನೆ ಮಾಡಿದ ಕಾರಣ ದಂಡ ವಿಧಿಸಿದ್ದಾರೆ.