alex Certify ಆಫ್ರಿಕಾ ಫುಟ್​ಬಾಲ್​ ಮುಖ್ಯಸ್ಥನಿಗೆ ಫಿಫಾ ಕೊಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಫ್ರಿಕಾ ಫುಟ್​ಬಾಲ್​ ಮುಖ್ಯಸ್ಥನಿಗೆ ಫಿಫಾ ಕೊಕ್​..!

ವಿಶ್ವ ಸಾಕರ್​ ಆಡಳಿತ ಮಂಡಳಿಯ ನೈತಿಕ ತನಿಖೆ ಹಿನ್ನೆಲೆ ಆಫ್ರಿಕಾದ ಫುಟ್​ಬಾಲ್​​ ಮುಖ್ಯಸ್ಥ ಅಹಮದ್​ ಅಹಮದ್​ರನ್ನ ಫಿಫಾ 5 ವರ್ಷಗಳ ಕಾಲ ಫುಟ್​ಬಾಲ್​ನಿಂದ ನಿಷೇಧಿಸಿದೆ.

ಕಾನ್ಫಡರೇಷನ್​ ಆಫ್​ ಆಫ್ರಿಕನ್​ ಫುಟ್​ಬಾಲ್​ ಅಧ್ಯಕ್ಷರಾಗಿರುವ ಅಹ್ಮದ್ ಮಾರ್ಚ್​ನಲ್ಲಿ ನಡೆಯಲಿರುವ ಚುನಾವಣೆಯನ್ನ ಎದುರಿಸುವ ಉದ್ದೇಶ ಹೊಂದಿದ್ದರು.

ಉಡುಗೊರೆ ಸೇರಿದಂತೆ ಇತರೆ ಪ್ರಯೋಜನಗಳನ್ನ ನೀಡುವ ಹಾಗೂ ಸ್ವೀಕರಿಸುವಲ್ಲಿ ಹಣ ದುರುಪಯೋಗ ಪಡಿಸಿಕೊಂಡ ಆರೋಪದಡಿಯಲ್ಲಿ ಅಹಮದ್​ ತಪ್ಪಿತಸ್ಥ ಎಂದು ಫಿಫಾ ಹೇಳಿಕೆ ನೀಡಿದೆ.

ಫಿಫಾ 5 ವರ್ಷಗಳ ಕಾಲ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಎಲ್ಲಾ ಫುಟ್​ಬಾಲ್​ ಸಂಬಂಧಿತ ಚಟುವಟಿಕೆಗಳಿಂದ ಅಹಮದ್​ರನ್ನ ನಿಷೇಧಿಸಿದೆ ಅಂತಾ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...