ವಿಶ್ವ ಸಾಕರ್ ಆಡಳಿತ ಮಂಡಳಿಯ ನೈತಿಕ ತನಿಖೆ ಹಿನ್ನೆಲೆ ಆಫ್ರಿಕಾದ ಫುಟ್ಬಾಲ್ ಮುಖ್ಯಸ್ಥ ಅಹಮದ್ ಅಹಮದ್ರನ್ನ ಫಿಫಾ 5 ವರ್ಷಗಳ ಕಾಲ ಫುಟ್ಬಾಲ್ನಿಂದ ನಿಷೇಧಿಸಿದೆ.
ಕಾನ್ಫಡರೇಷನ್ ಆಫ್ ಆಫ್ರಿಕನ್ ಫುಟ್ಬಾಲ್ ಅಧ್ಯಕ್ಷರಾಗಿರುವ ಅಹ್ಮದ್ ಮಾರ್ಚ್ನಲ್ಲಿ ನಡೆಯಲಿರುವ ಚುನಾವಣೆಯನ್ನ ಎದುರಿಸುವ ಉದ್ದೇಶ ಹೊಂದಿದ್ದರು.
ಉಡುಗೊರೆ ಸೇರಿದಂತೆ ಇತರೆ ಪ್ರಯೋಜನಗಳನ್ನ ನೀಡುವ ಹಾಗೂ ಸ್ವೀಕರಿಸುವಲ್ಲಿ ಹಣ ದುರುಪಯೋಗ ಪಡಿಸಿಕೊಂಡ ಆರೋಪದಡಿಯಲ್ಲಿ ಅಹಮದ್ ತಪ್ಪಿತಸ್ಥ ಎಂದು ಫಿಫಾ ಹೇಳಿಕೆ ನೀಡಿದೆ.
ಫಿಫಾ 5 ವರ್ಷಗಳ ಕಾಲ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಎಲ್ಲಾ ಫುಟ್ಬಾಲ್ ಸಂಬಂಧಿತ ಚಟುವಟಿಕೆಗಳಿಂದ ಅಹಮದ್ರನ್ನ ನಿಷೇಧಿಸಿದೆ ಅಂತಾ ಹೇಳಿದೆ.