
ಕ್ರಿಕೆಟ್ ಮೈದಾನದಲ್ಲಿ ಸಾಕಷ್ಟು ಬಾರಿ ಫನ್ನಿ ಘಟನೆಗಳು ನಡೆದು ಬಿಡುತ್ತವೆ. ಹತ್ತಾರು ಕ್ಯಾಮೆರಾಗಳು ಮೈದಾನದ ಮೂಲೆ ಮೂಲೆ ಕವರ್ ಮಾಡುವ ಕಾರಣ ಆಟಗಾರರ ನಡುವೆ ಘಟಿಸುವ ವಿನೋದಮಯ ಘಟನೆಗಳ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ.
ಅಬುಧಾಬಿ ಟಿ10 ಲೀಗ್ ಟೂರ್ನಿಯ ಪಂದ್ಯವೊಂದರಲ್ಲಿ ಕ್ರಿಕೆಟರ್ ಒಬ್ಬರು ಆಟದ ಸಂದರ್ಭದಲ್ಲಿ ತಮ್ಮ ಜೆರ್ಸಿ ಬದಲಿಸಿಕೊಳ್ಳುತ್ತಿರುವ ಘಟನೆಯೊಂದು ವೀಕ್ಷಕರಿಗೆ ಭಾರೀ ನಗು ಮೂಡಿಸಿದೆ.
ಬಾಯ್ ಫ್ರೆಂಡ್ ನಂಬಿ ಡೂಪ್ಲಿಕೇಟ್ ಕೀ ಕೊಟ್ಟು ಇಂಗು ತಿಂದ ಮಂಗನಂತಾದ ಯುವತಿ
ಅಬುಧಾಬಿ ತಂಡದ ಪರವಾಗಿ ಆಡುವ ರೋಹನ್ ಮುಸ್ತಾಫಾ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಎದುರಾಳಿ ತಂಡದ ಬ್ಯಾಟ್ಸ್ಮನ್ ವಾಸಿಂ ಮೊಹಮ್ಮದ್ ಅವರತ್ತ ಚೆಂಡನ್ನು ಬಾರಿಸಿದ್ದಾರೆ.
ಆದರೆ ಮುಸ್ತಾಫಾ ಇದೇ ವೇಳೆ ತಮ್ಮ ಜೆರ್ಸಿ ಬದಲಿಸಿಕೊಳ್ಳುತ್ತಿದ್ದ ಕಾರಣ ಚೆಂಡನ್ನು ತಡೆಯಲು ವಿಫಲರಾಗಿದ್ದಾರೆ. ಗಲಿಬಲಿಯಲ್ಲಿ ಟೀ ಶರ್ಟ್ ಅನ್ನೂ ಸರಿಯಾಗಿ ಹಾಕಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.