alex Certify ಮುಸ್ಲಿಂ ಬಾಂಧವರಿಗೆ ಈದ್​ ಹಬ್ಬದ ಶುಭಾಶಯ ಕೋರಿದ ಸ್ಟಾರ್​ ಆಟಗಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಸ್ಲಿಂ ಬಾಂಧವರಿಗೆ ಈದ್​ ಹಬ್ಬದ ಶುಭಾಶಯ ಕೋರಿದ ಸ್ಟಾರ್​ ಆಟಗಾರರು

ಟೀಂ ಇಂಡಿಯಾ ನಾಯಕ ವಿರಾಟ್​​​ ಕೊಹ್ಲಿ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳಿಗೆ ಈದ್​ ಉಲ್​ ಫಿತರ್​​ನ ಶುಭಾಶಯ ಕೋರಿದ್ದಾರೆ. ಟ್ವಿಟರ್​ನಲ್ಲಿ ಕೊಹ್ಲಿ, ಈ ಹಬ್ಬವು ನಿಮಗೆ ಪ್ರೀತಿ, ಶಾಂತಿ ಹಾಗೂ ಸಂಭ್ರಮವನ್ನ ತರಲಿ. ಹಿಂದೆಂದೂ ಕಂಡಿರದ ಈ ಸಮಯದಲ್ಲಿ ಈದ್​ ಹಬ್ಬವು ಪ್ರೀತಿಯನ್ನ ಹೊತ್ತು ತರಲಿ. ಎಲ್ಲರಿಗೂ ಈದ್​ ಹಬ್ಬದ ಶುಭಾಶಯ. ಎಲ್ಲರೂ ಸುರಕ್ಷಿತವಾಗಿರಿ ಎಂದು ಟ್ವೀಟ್​ ಮಾಡಿದ್ದಾರೆ.

ಇನ್ನು ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಸಹ ಅಭಿಮಾನಿಗಳಿಗೆ ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯ ಕೋರಿದ್ದಾರೆ. ಅಲ್ಲಾ ಈ ಎಲ್ಲಾ ಕಷ್ಟಗಳನ್ನ ಕಡಿಮೆ ಮಾಡಿ ಜಗತ್ತನ್ನ ಗುಣಪಡಿಸಲಿ ಎಂದು ಟ್ವೀಟಾಯಿಸಿದ್ದಾರೆ.

ಈದ್​ ಉಲ್​ ಫಿತರ್​ನ್ನು ವಿಶ್ವದ ಬಹುತೇಕ ದೇಶಗಳಲ್ಲಿ ಗುರುವಾರ ಆಚರಿಸಲಾಗುತ್ತದೆ. ಕೆಲವೊಂದು ಕಡೆ ಈ ಹಬ್ಬವನ್ನ ಶುಕ್ರವಾರ ಆಚರಣೆ ಮಾಡುವುದಿದೆ.
ವಿರಾಟ್​ ಕೊಹ್ಲಿ, ಸಾನಿಯಾ ಮಿರ್ಜಾ ಮಾತ್ರವಲ್ಲದೇ ವಿವಿಧ ರಾಷ್ಟ್ರಗಳ ಕ್ರಿಕೆಟ್​ ಆಟಗಾರರು ಟ್ವಿಟರ್​ನಲ್ಲಿ ಈದ್​ ಹಬ್ಬದ ಶುಭಾಶಯ ಕೋರಿದ್ದು, ಈ ಹಬ್ಬವು ಜಗತ್ತಿಗೆ ಬಂದಿರುವ ವಿಪತ್ತನ್ನ ಹೋಗಲಾಡಿಸಲಿ ಎಂದು ಆಶಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...