ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿರುವ ಮಹೇಂದ್ರ ಸಿಂಗ್ ಧೋನಿ 39ನೇ ವಯಸ್ಸಿನಲ್ಲೂ ಉತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾವಲ್ ತೆವಾಟಿಯಾ ಎಸೆತದಲ್ಲಿ ಧೋನಿ ಇನ್ನೇನು ರನೌಟ್ ಆಗೇ ಬಿಟ್ಟರು ಅನ್ನೋವಷ್ಟರಲ್ಲಿ ಅಪರೂಪದಲ್ಲಿ ಅಪರೂಪ ಎಂಬಂತೆ ಡೈವ್ ಹೊಡೆದು ತಮ್ಮ ವಿಕೆಟ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ್ರು.
ಆದರೆ ಮಹೇಂದ್ರ ಸಿಂಗ್ ಧೋನಿಯ ಈ ಪ್ರದರ್ಶನದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳನ್ನ ಎದುರಿಸುವಂತಾಯ್ತು. 2019ರಲ್ಲಿ ಐಸಿಸಿ ಕ್ರಿಕೆಟ್ ವಿಶ್ವ ಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಾವಳಿಯಲ್ಲೂ ಇಂತದ್ದೇ ಡೈವ್ ಹೊಡೆಯದೇ ರನೌಟ್ ಆಗಿದ್ದೇಕೆ ಎಂದು ಅನೇಕರು ಪ್ರಶ್ನೆ ಮಾಡ್ತಿದ್ದಾರೆ.
ಆದರೆ ಸೋಶಿಯಲ್ ಮೀಡಿಯಾದಲ್ಲಿ ಕ್ಯಾಪ್ಟನ್ ಕೂಲ್ ವಿರುದ್ಧ ಅಪಸ್ವರಗಳು ಕೇಳಿ ಬರ್ತಾ ಇದ್ದಂತೆಯೇ ಧೋನಿ ಅಭಿಮಾನಿಗಳು ದೇಶಕ್ಕಾಗಿ ಧೋನಿ ಯಾವ್ಯಾವ ತ್ಯಾಗ ಮಾಡಿದ್ದಾರೆ. ವಿಶ್ವಕಪ್ನಂತೆಯೇ ಎಷ್ಟು ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ ಅನ್ನೋದನ್ನ ಟ್ವಿಟರ್ನಲ್ಲಿ ಶೇರ್ ಮಾಡುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸುತ್ತಿದ್ದಾರೆ.
https://twitter.com/AadiSRK27/status/1384166298263769089
https://twitter.com/BhavyaDhoni/status/1384169387096113157
https://twitter.com/AqeelViews/status/1384169319760744448