
ಇತ್ತ ಕಿಬ್ಬೊಟ್ಟೆಯ ಒತ್ತಡದಿಂದ ಬಳಲುತ್ತಿರುವ ಜಸ್ಪ್ರೀತ್ ಬೂಮ್ರಾ ಕೂಡ ನಾಲ್ಕನೇ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಟೀಂ ಇಂಡಿಯಾ ಗಾಯಾಳುಗಳ ಪಟ್ಟಿ ಹನುಮನ ಬಾಲದಂತೆ ಬೆಳೆಯುತ್ತಲೇ ಇದ್ದು ಬ್ರಿಸ್ಬೇನ್ ಟೆಸ್ಟ್ ಕತೆ ಏನು ಅಂತಾ ಎಲ್ಲರೂ ತಲೆ ಕೆಡಿಸಿಕೊಳ್ಳುವಂತಾಗಿದೆ.
ಇನ್ನು ಪ್ರತಿದಿನ ಒಂದೊಂದೇ ಆಟಗಾರರು ಬ್ರಿಸ್ಪೇನ್ ಟೆಸ್ಟ್ನಿಂದ ಹೊರಬೀಳ್ತಾ ಇರೋದ್ರಿಂದ ಟೀಂ ಇಂಡಿಯಾ ಅಭಿಮಾನಿಗಳು ಹೊಸ ಪ್ಲಾನ್ ಒಂದನ್ನ ಮಾಡಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾವನ್ನ ಕಾಪಾಡೋಕೆ ಲಗಾನ್ ಸಿನಿಮಾದ ಕ್ರಿಕೆಟ್ ತಂಡವನ್ನ ಕಳಿಸಿದ್ರೆ ಹೇಗೆ ಅಂತಾ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ.
https://twitter.com/GarvPe/status/1348863740054175744
https://twitter.com/_kunalyadav98/status/1348864023882825731