ಸಿಡ್ನಿ: ಲಾಕ್ಡೌನ್ ನಿಂದಾಗಿ ಮನೆಯಲ್ಲಿ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವ ಆಸ್ಟ್ರೇಲಿಯದ ಕ್ರಿಕೆಟ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತಮ್ಮ ಟಿಕ್ ಟಾಕ್ ವಿಡಿಯೋಗಳಿಂದ ಸುದ್ದಿಯಾಗಿದ್ದಾರೆ.
ಟಿಕ್ ಟಾಕ್ ನಲ್ಲಿ “ಬುಟ್ಟ ಬೊಮ್ಮ” ಎಂಬ ತೆಲುಗಿನ ಹಾಡು ಕೇಳದವರೇ ಇಲ್ಲವೇನೋ. ಟಿಕ್ ಟಾಕ್ ಮಾಡುವವರ ನೆಚ್ಚಿನ ಹಾಡಿನಲ್ಲಿ ಇದೂ ಒಂದು.
ಈಗ ಈ ಹಾಡಿಗೆ ಆಸ್ಟ್ರೇಲಿಯಾದ ಅದ್ಬುತ ಆಟಗಾರ ಡೇವಿಡ್ ವಾರ್ನರ್ ಸಹ ತಮ್ಮ ಪತ್ನಿ ಕಾಂಡಿಸ್ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ಅಭಿನಯದ ಅಲಾ ವೈಕುಂಟಪುರಮುುಲೂ ಚಿತ್ರದ ಹಾಡು ಇದಾಗಿದೆ.
ಎಲ್ಲವೂ ಸರಿಯಾಗಿದ್ದರೆ ವಾರ್ನರ್ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಐಪಿಎಲ್ ನಲ್ಲಿ ಆಡಬೇಕಿತ್ತು. ಸ್ವಲ್ಪ ದಿನದ ಹಿಂದೆ “ಶೀಲಾ ಕಿ ಜವಾನಿ” ಹಾಡಿಗೆ ತಮ್ಮ ಮಗಳೊಂದಿಗೆ ಹೆಜ್ಜೆ ಹಾಕಿದ್ದ ವಾರ್ನರ್ ನೋಡುಗರನ್ನು ರಂಜಿಸಿದ್ದರು.