alex Certify BREAKING: ಫಿಫಾ ಫುಟ್ಬಾಲ್ ವಿಶ್ವಕಪ್ ನಿಂದ ಹೊರಬಿದ್ದ ಬಲಿಷ್ಠ ಬ್ರೆಜಿಲ್: ಸೆಮಿಫೈನಲ್ ಗೆ ಕ್ರೊಯೇಷಿಯಾ ಲಗ್ಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಫಿಫಾ ಫುಟ್ಬಾಲ್ ವಿಶ್ವಕಪ್ ನಿಂದ ಹೊರಬಿದ್ದ ಬಲಿಷ್ಠ ಬ್ರೆಜಿಲ್: ಸೆಮಿಫೈನಲ್ ಗೆ ಕ್ರೊಯೇಷಿಯಾ ಲಗ್ಗೆ

ಫಿಫಾ ವಿಶ್ವಕಪ್ ನಿಂದ ಬಲಿಷ್ಠ ಬ್ರೆಜಿಲ್ ಹೊರ ಬಿದ್ದಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾ ವಿರುದ್ಧ ಸೋಲು ಕಂಡಿದೆ.

ಬ್ರೆಜಿಲ್ ತಂಡದ ವಿರುದ್ಧ 4 -2 ಗೋಲುಗಳ ಅಂತರದಿಂದ ಕ್ರೊಯೇಷಿಯಾ ಗೆಲುವು ಸಾಧಿಸಿ ಸೆಮಿಫೈನಲ್ ಗೆ ಪ್ರವೇಶಿಸಿದೆ.

ವಿಶ್ವಕಪ್ ನಿಂದ ಬಲಿಷ್ಠ ಬ್ರೆಜಿಲ್ ತಂಡ ಔಟ್ ಆಗಿದ್ದು, ಬ್ರೆಜಿಲ್ ತಂಡದ ಕೋಚ್ ಟೈಟ್ ರಾಜೀನಾಮೆಗೆ ನಿರ್ಧರಿಸಿದ್ದಾರೆ. ಬ್ರೆಜಿಲ್ ಕೋಚ್ ಸ್ಥಾನದಿಂದ ನಿರ್ಗಮಿಸುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ಕ್ರೊಯೇಷಿಯಾ ಬ್ರೆಜಿಲ್ ಅನ್ನು ಪೆನಾಲ್ಟಿ ಕಿಕ್‌ಗಳಲ್ಲಿ ಹೆಚ್ಚು ಲಿವಾಕೋವಿಕ್ ವೀರರಸದೊಂದಿಗೆ ಹೊರಹಾಕಿತು.

ಬ್ರೆಜಿಲ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಭರ್ಜರಿ ಜಯ ಸಾಧಿಸಿದ ಕ್ರೊವೇಷಿಯಾ ವಿಶ್ವಕಪ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...