ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ ಪಂದ್ಯಾವಳಿಯಲ್ಲಿ ಭಾಗಿಯಾಗಲಿರುವ ಭಾರತೀಯ ಆಟಗಾರರು ಹಾಗೂ ಸಿಬ್ಬಂದಿಗೆ ಮಾರ್ಚ್ನಿಂದ ಲಸಿಕೆ ಡ್ರೈವ್ ನಡೆಸಲಾಗುವುದು ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಭಾರತ ಸೇರಿದಂತೆ ತನ್ನ ಸದಸ್ಯ ರಾಷ್ಟ್ರಗಳ ಬಳಿ ಔಪಚಾರಿಕವಾಗಿ ಈ ಸಂವಹನವನ್ನ ನಡೆಸಿದೆ. ಒಲಿಂಪಿಕ್ ಸಮಿತಿಯಿಂದ ಅಧಿಕೃತ ಇ ಮೇಲ್ ಸ್ವೀಕರಿಸಿರೋದನ್ನ ದೃಢಪಡಿಸಿದೆ.
ಟೋಕಿಯೋ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಕ್ರೀಡಾಪಟುಗಳ ಸಮಗ್ರ ಪಟ್ಟಿಯನ್ನ ತಯಾರಿಸಲು ಐಒಎ ಯೋಜನೆ ರೂಪಿಸಿದೆ.