alex Certify BIG BREAKING: ಅಪಘಾತದಲ್ಲಿ ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಗಂಭೀರ; ಆಸ್ಪತ್ರೆಗೆ ದಾಖಲು; ಡಿವೈಡರ್ ಡಿಕ್ಕಿಯಾದ ಕಾರ್ ಗೆ ಬೆಂಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಅಪಘಾತದಲ್ಲಿ ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಗಂಭೀರ; ಆಸ್ಪತ್ರೆಗೆ ದಾಖಲು; ಡಿವೈಡರ್ ಡಿಕ್ಕಿಯಾದ ಕಾರ್ ಗೆ ಬೆಂಕಿ

ನವದೆಹಲಿ: ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಅವರ ಕಾರು ಗುರುವಾರ ಅಪಘಾತಕ್ಕೀಡಾಗಿದೆ. ದೆಹಲಿಯಿಂದ ಮನೆಗೆ ಮರಳುತ್ತಿದ್ದಾಗ ರೂರ್ಕಿ ಬಳಿ ಅವರ ಕಾರು ಅಪಘಾತಕ್ಕೀಡಾಯಿತು. ರಿಷಬ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಪ್ರಯಾಣಿಸುತ್ತಿದ್ದ ಕಾರ್ ಗೆ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿದೆ. ಡಿವೈಡರ್ ಗೆ ಡಿಕ್ಕಿಯಾದ ರಭಸಕ್ಕೆ ಕಾರ್ ಹೊತ್ತಿ ಉರಿದಿದ್ದು ಅಪಘಾತದಲ್ಲಿ ರಿಷಬ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತ ಕ್ರಿಕೆಟ್ ತಂಡದ ಆಟಗಾರ ರಿಷಬ್ ಪಂತ್ ಸ್ಥಿತಿ ಗಂಭೀರವಾಗಿದೆ. ರಿಷಬ್ ಅವರ ತಲೆ, ಬೆನ್ನು ಕಾಲುಗಳಿಗೆ ಗಾಯಗಳಾಗಿವೆ.

ಕೊತ್ವಾಲಿ ಪ್ರದೇಶದ ಎನ್.ಹೆಚ್. 58ರಲ್ಲಿ ಅವರ ಕಾರ್ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. 108 ಸಿವಿಲ್ ಆಸ್ಪತ್ರೆಯ ಸಹಾಯದಿಂದ ಪಂತ್ ಅವರನ್ನು ಚಿಕಿತ್ಸೆಗಾಗಿ ರೂರ್ಕಿಗೆ ಕಳುಹಿಸಲಾಯಿತು, ಘಟನೆಯು ಬೆಳಿಗ್ಗೆ 5:15 ಕ್ಕೆ ಸಂಭವಿಸಿದೆ. ಇದೀಗ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಹರಿದ್ವಾರ ಜಿಲ್ಲೆಯ ಮಂಗಳೌರ್ ಮತ್ತು ನರ್ಸನ್ ನಡುವೆ ಕ್ರಿಕೆಟಿಗ ರಿಷಬ್ ಪಂತ್ ಅವರ ಕಾರು ಅಪಘಾತಕ್ಕೀಡಾಗಿದೆ. ರೂರ್ಕಿ ಸಿವಿಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಅವರನ್ನು ಡೆಹ್ರಾಡೂನ್ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು  ಎಸ್ಪಿ ದೇಹತ್ ಸ್ವಪನ್ ಕಿಶೋರ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...