alex Certify ಜೋಕೋವಿಕ್​ ಮಾತಿಗೂ ಕಿಮ್ಮತ್ತು ನೀಡದ ಆಸ್ಟ್ರೇಲಿಯಾ ಟೆನ್ನಿಸ್​ ಆಡಳಿತ ಮಂಡಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೋಕೋವಿಕ್​ ಮಾತಿಗೂ ಕಿಮ್ಮತ್ತು ನೀಡದ ಆಸ್ಟ್ರೇಲಿಯಾ ಟೆನ್ನಿಸ್​ ಆಡಳಿತ ಮಂಡಳಿ

ಆಸ್ಟ್ರೇಲಿಯನ್​ ಓಪನ್​ ಟೂರ್ನಿ 2021ರಲ್ಲಿ ಭಾಗಿಯಾಗಲು ತೆರಳಿರುವ ಟೆನ್ನಿಸ್​ ಆಟಗಾರರಿಗೆ ಕ್ವಾರಂಟೈನ್​ ಬಿಸಿ ತುಪ್ಪವಾಗಿ ಪರಿಣಮಿಸಿದೆ. ವಿಶ್ವದ ನಂಬರ್ 1 ಟೆನ್ನಿಸ್​ ಆಟಗಾರ ನೋವಾಕ್​ ಜೋಕೋವಿಕ್​ ಕ್ವಾರಂಟೈನ್​ ಅವಧಿಯನ್ನ ಕಡಿಮೆ ಮಾಡುವಂತೆ ಕೇಳಿಕೊಂಡಿದ್ದಾರೆ. ಆದರೆ ಆಡಳಿತ ಮಂಡಳಿ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದೆ.

ಜೊಕೋವಿಕ್​ ಅಡಿಲೇಡ್​​ನಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್​ಗೊಳಗಾಗಿದ್ದಾರೆ. 70ಕ್ಕೂ ಹೆಚ್ಚು ಆಟಗಾರರು ಹೋಟೆಲ್​ ರೂಂಗಳಲ್ಲಿ ಕ್ವಾರಂಟೈನ್​ ಆಗಿದ್ದು 14 ದಿನಗಳ ಕಾಲ ರೂಮಿನಿಂದ ಹೊರಬಾರದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಅಲ್ಲದೇ ಕೇವಲ 5 ತಾಸುಗಳ ಅವಧಿಯವರೆಗೆ ಮಾತ್ರ ಪ್ರ್ಯಾಕ್ಟಿಸ್​ ಮಾಡಲು ಅನುಮತಿ ನೀಡಲಾಗಿದೆ.

ಹೋಟೆಲ್​ನ ಆಹಾರದ ವ್ಯವಸ್ಥೆ ಬಗ್ಗೆ ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲ ಸ್ಟಾರ್​ ಟೆನ್ನಿಸ್​ ಆಟಗಾರರು ಆಕ್ರೋಶ ಹೊರಹಾಕ್ತಿದ್ದಾರೆ.

ಆದರೆ ಆಟಗಾರರ ಬೇಡಿಕೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ವಿಕ್ಟೋರಿಯಾ ಸ್ಟೇಟ್​ ಪ್ರೀಮಿಯರ್​ ಡೇನಿಯಲ್​ ಆಂಡ್ರಿವ್ಸ್, ಇಲ್ಲಿ ಯಾರಿಗೂ ವಿಶೇಷ ಆದ್ಯತೆ ನೀಡಲಾಗೋದಿಲ್ಲ. ವೈರಸ್​ ನಿಮಗೆ ವಿಐಪಿ ವ್ಯವಸ್ಥೆ ನೀಡೋದಿಲ್ಲ ಅಂದಮೇಲೆ ನಿಯಮಾವಳಿಗಳಲ್ಲೂ ವಿಐಪಿ ವ್ಯವಸ್ಥೆ ನೀಡೋಕೆ ಸಾಧ್ಯವಿಲ್ಲ. ನಿಮಗೆ ಬೇಡಿಕೆಗಳನ್ನೆಲ್ಲ ಹೇಳಿಕೊಳ್ಳೋಕೆ ಮುಕ್ತ ಅವಕಾಶವಿದೆ. ಆದರೆ ನಿಮ್ಮೆಲ್ಲ ಪ್ರಶ್ನೆಗೆ ನಮ್ಮ ಉತ್ತರ ಮಾತ್ರ ‘ಇಲ್ಲ’ ಎಂದಾಗಿದೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...