
ಆದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಎಂ.ಎಸ್. ಧೋನಿಯನ್ನ ಮಿಸ್ ಮಾಡಿಕೊಳ್ತಿದ್ದಾರೆ ಅನ್ನೋದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಾಕ್ಷ್ಯ ಒದಗಿಸಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಟೀಂ ಇಂಡಿಯಾ ಅಭಿಮಾನಿಗಳು ವಿ ಮಿಸ್ ಯೂ ಧೋನಿ ಎಂಬ ಬ್ಯಾನರ್ನ್ನ ಹಿಡಿದಿದ್ದರು. ಈ ಬ್ಯಾನರ್ ನೋಡಿದ ವಿರಾಟ್ ಕೊಹ್ಲಿ ಮೈದಾನದಿಂದಲೇ ನಾನು ಧೋನಿಯನ್ನ ಮಿಸ್ ಮಾಡಿಕೊಳ್ತಿದ್ದೇನೆ ಎಂಬ ಸಂದೇಶವನ್ನ ರವಾನಿಸಿದ್ದಾರೆ. ಕ್ಯಾಮರಾ ಕಣ್ಣಲ್ಲಿ ಈ ಕ್ಷಣ ಸೆರೆಯಾಗಿದ್ದು ಟ್ವಿಟರ್ನಲ್ಲಿ ಟ್ರೆಂಡಿಂಗ್ ವಿಡಿಯೋ ಆಗಿದೆ.