
ಬೌಲರ್ಗಳಾದ ಯಜುವೇಂದ್ರ ಚಹಲ್ ಹಾಗೂ ರವೀಂದ್ರ ಜಡೇಜಾ ತಮ್ಮ ಬೌಲಿಂಗ್ ಪರಾಕ್ರಮ ತೋರಿಸುವಲ್ಲಿ ಸಂಪೂರ್ಣ ವಿಫಲರಾದ್ರು. ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಫಾಸ್ಟ್ ಬೌಲರ್ ಜಸ್ಪ್ರೀತ್ ಬೂಮ್ರಾ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹೇಳಿಕೊಳ್ಳುವಂತೆ ಪ್ರದರ್ಶನ ನೀಡಲಿಲ್ಲ. ಇನ್ನುಳಿದಂತೆ ಶಮಿ, ಸೈನಿ ಕೂಡ ಕಳಪೆ ಪ್ರದರ್ಶನ ತೋರಿದ್ರು.
ಟೀಂ ಇಂಡಿಯಾ ಕಳಪೆ ಬೌಲಿಂಗ್ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿರುವ ಇರ್ಫಾನ್ ಪಠಾಣ್, ಆಸ್ಟ್ರೇಲಿಯಾದಲ್ಲಿ ನಮ್ಮ ಬೌಲರ್ಗಳು ಸರಿಯಾದ ಪಥ ಕಂಡುಕೊಳ್ಳುವಲ್ಲಿ ವಿಫಲರಾದ್ರು. ನಮ್ಮ ತಂಡದ ಬೌಲರ್ಗಳ ಗುಣಮಟ್ಟದ ಬಗ್ಗೆ ಮಾತಿಲ್ಲ. ಆದರೆ ಸ್ಥಿರತೆ ಬಗ್ಗೆ ಪ್ರಶ್ನೆ ಉಂಟು ಮಾಡಿದೆ ಅಂತಾ ಟ್ವೀಟ್ ಮಾಡಿದ್ರು.