alex Certify ಟೀಂ ಇಂಡಿಯಾ ಬೌಲರ್​ಗಳ ಬಗ್ಗೆ ಇರ್ಫಾನ್​ ಪಠಾಣ್​ ಬೇಸರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾ ಬೌಲರ್​ಗಳ ಬಗ್ಗೆ ಇರ್ಫಾನ್​ ಪಠಾಣ್​ ಬೇಸರ

ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾ ಜೊತೆಗಿನ ಎರಡನೇ ಪಂದ್ಯದಲ್ಲೂ ಸೋಲನ್ನ ಕಂಡಿದೆ. ಟೀಂ ಇಂಡಿಯಾ ಬೌಲರ್​ ಕಳಪೆ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ಸಿಡ್ನಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಗೆಲುವನ್ನ ತನ್ನದಾಗಿಸಿಕೊಂಡಿದೆ.

ಬೌಲರ್​ಗಳಾದ ಯಜುವೇಂದ್ರ ಚಹಲ್​ ಹಾಗೂ ರವೀಂದ್ರ ಜಡೇಜಾ ತಮ್ಮ ಬೌಲಿಂಗ್​ ಪರಾಕ್ರಮ ತೋರಿಸುವಲ್ಲಿ ಸಂಪೂರ್ಣ ವಿಫಲರಾದ್ರು. ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಫಾಸ್ಟ್​ ಬೌಲರ್​ ಜಸ್ಪ್ರೀತ್​ ಬೂಮ್ರಾ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹೇಳಿಕೊಳ್ಳುವಂತೆ ಪ್ರದರ್ಶನ ನೀಡಲಿಲ್ಲ. ಇನ್ನುಳಿದಂತೆ ಶಮಿ, ಸೈನಿ ಕೂಡ ಕಳಪೆ ಪ್ರದರ್ಶನ ತೋರಿದ್ರು.

ಟೀಂ ಇಂಡಿಯಾ ಕಳಪೆ ಬೌಲಿಂಗ್ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿರುವ ಇರ್ಫಾನ್​​ ಪಠಾಣ್​, ಆಸ್ಟ್ರೇಲಿಯಾದಲ್ಲಿ ನಮ್ಮ ಬೌಲರ್​ಗಳು ಸರಿಯಾದ ಪಥ ಕಂಡುಕೊಳ್ಳುವಲ್ಲಿ ವಿಫಲರಾದ್ರು. ನಮ್ಮ ತಂಡದ ಬೌಲರ್​ಗಳ ಗುಣಮಟ್ಟದ ಬಗ್ಗೆ ಮಾತಿಲ್ಲ. ಆದರೆ ಸ್ಥಿರತೆ ಬಗ್ಗೆ ಪ್ರಶ್ನೆ ಉಂಟು ಮಾಡಿದೆ ಅಂತಾ ಟ್ವೀಟ್​ ಮಾಡಿದ್ರು.

— Irfan Pathan (@IrfanPathan) November 29, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...