
ವ್ಯಾಯಾಮದ ಚೆಂಡು, ಹಲಗೆಯ ಮೇಲೆ ಸೈಕಲ್ ಸವಾರಿ, ಟೈರ್ನಿಂದ ಬ್ಯಾಕ್ಫ್ಲಿಪ್, ಹಗ್ಗದ ಮೇಲಿನ ನಡಿಗೆ ಸೇರಿದಂತೆ ವಿವಿಧ ಸಾಹಸಗಳನ್ನ ಪ್ರದರ್ಶಿಸಿದ್ದಾರೆ ಆಂಡ್ರಿ ರಾಗೆಟ್ಲಿ.
ಮುಖಕ್ಕೆ ಮಾಸ್ಕ್ ಹಾಕಿಕೊಂಡೇ ಈ ಆಟವನ್ನ ಆಡಿನ ಆಂಡ್ರಿ ಆಟ ಮುಗಿಯೋವರೆಗೂ ಮಧ್ಯದಲ್ಲಿ ಎಲ್ಲಿಯೂ ವಿಶ್ರಾಂತಿ ಪಡೆಯೋದಿಲ್ಲ. ಈ ವಿಡಿಯೋವನ್ನ ಪೋಸ್ಟ್ ಮಾಡಿರುವ ರಾಗೆಟ್ಲಿ 148 ಪ್ರಯತ್ನಗಳ ಬಳಿಕ ಈ ಸಾಧನೆ ಮಾಡಿದ್ದೇನೆ ಅಂತಾ ಬರೆದುಕೊಂಡಿದ್ದಾರೆ.
ಒಲಿಂಪಿಕ್ ಕೂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಿದೆ. ಈ ವಿಡಿಯೋ ಸಾಮಾನ್ಯ ಜನರನ್ನ ಆಕರ್ಷಿಸೋದು ಹಾಗಿರಲಿ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಕೂಡ ಈ ವಿಡಿಯೋ ಕಂಡು ಹುಬ್ಬೇರಿಸಿದ್ದಾರೆ .