alex Certify ಆಥಿಯಾ ಶೆಟ್ಟಿ ಇನ್ಸ್​ಟಾ ಪೋಸ್ಟ್​ ಗೆ ಹೀಗಿತ್ತು ಕೆ.ಎಲ್​. ರಾಹುಲ್​ ಪ್ರತಿಕ್ರಿಯೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಥಿಯಾ ಶೆಟ್ಟಿ ಇನ್ಸ್​ಟಾ ಪೋಸ್ಟ್​ ಗೆ ಹೀಗಿತ್ತು ಕೆ.ಎಲ್​. ರಾಹುಲ್​ ಪ್ರತಿಕ್ರಿಯೆ..!

Athiya Shetty shares stunning pic in a swimsuit, here's what rumoured  boyfriend KL Rahul has to say - bollywood - Hindustan Timesನಾವೆಲ್ಲ ಈ ವರ್ಷದ ಕೊನೆಯ ತಿಂಗಳಲ್ಲಿ ಇದ್ದೇವೆ. ಡಿಸೆಂಬರ್​ ಅಂದ್ಮೇಲೆ ಚಳಿ ಎಷ್ಟರ ಮಟ್ಟಿಗೆ ಇರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಚಳಿಯನ್ನ ತಪ್ಪಿಸಿಕೊಳ್ಳಬೇಕು ಅಂತಾ ಸೂರ್ಯನನ್ನ ಹುಡುಕೋ ಮೊದಲು ಸನ್​ ಸ್ಕ್ರೀನ್​ ಹಚ್ಚಲು ಮರೆಯದಿರಿ ಅಂತಾ ಬಾಲಿವುಡ್​ ನಟಿ ಆಥಿಯಾ ಶೆಟ್ಟಿ ತಮ್ಮ ಇನ್ಸ್​ಟಾಗ್ರಾಂ ಪೋಸ್ಟ್ ಮೂಲಕ ಕಿವಿಮಾತನ್ನ ಹೇಳಿದ್ದಾರೆ.

ಸೂರ್ಯನ ಬೆಳಕಿಗೆ ಮುಖವೊಡ್ಡಿ ಸೆಲ್ಫಿ ತೆಗೆದುಕೊಂಡಿರುವ ಬಾಲಿವುಡ್​ ನಟಿ ಸುನಿಲ್​ ಶೆಟ್ಟಿ ಪುತ್ರಿ ಆಥಿಯಾ ಎಸ್​ಪಿಎಫ್​ ಆನ್​ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ನಟಿ ಸರಳವಾಗಿ ತುರುಬನ್ನ ಹಾಕಿದ್ದು ಬಿಳಿ ಬಣ್ಣದ ಡ್ರೆಸ್​ ಧರಿಸಿದ್ದಾರೆ. ಆಥಿಯಾ ಈ ಫೋಟೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಕ್ರಿಕೆಟರ್​ ಕೆ.ಎಲ್.​ ರಾಹುಲ್​ ಸೇರಿದಂತೆ 2 ಲಕ್ಷಕ್ಕೂ ಹೆಚ್ಚು ಮಂದಿ ಫೋಟೋಗೆ ಲೈಕ್ಸ್ ನೀಡಿದ್ದಾರೆ.

ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಟೀಂ ಇಂಡಿಯಾ ಆಟಗಾರ ಕೆ.ಎಲ್.​ ರಾಹುಲ್​ ಜೊತೆ ಗುಪ್ತ್​ ಗುಪ್ತ್​ ಆಗಿ ಲವ್​ ಮಾಡ್ತಿದ್ದಾರೆ ಎಂಬ ಸುದ್ದಿ ಅನೇಕ ದಿನಗಳಿಂದ ಹರಿದಾಡುತ್ತಲೇ ಇದೆ. ಕೆಲ ದಿನಗಳ ಹಿಂದಷ್ಟೇ ಆಥಿಯಾ ಜನ್ಮ ದಿನದಂದು ಫೋಟೋ ಶೇರ್​ ಮಾಡಿದ್ದ ರಾಹುಲ್​, ಜನುಮ ದಿನದ ಶುಭಾಶಯಗಳು ಹುಚ್ಚು ಮಗು ಎಂದು ಮುದ್ದಾಗಿ ಶುಭ ಕೋರಿದ್ದರು. ಈ ವದಂತಿ ಬಗ್ಗೆ ಈ ಜೋಡಿ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

View this post on Instagram

A post shared by Athiya Shetty (@athiyashetty)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...