alex Certify ಮುಂಬೈ ಕ್ರಿಕೆಟ್ ತಂಡ ಸೇರ್ಪಡೆಗೊಂಡ ಸಚಿನ್‌ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈ ಕ್ರಿಕೆಟ್ ತಂಡ ಸೇರ್ಪಡೆಗೊಂಡ ಸಚಿನ್‌ ಪುತ್ರ

ಕ್ರಿಕೆಟ್‌ ಲೋಕದ ದಂತ ಕಥೆ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ 21 ವರ್ಷದ ಅರ್ಜುನ್‌ ತೆಂಡೂಲ್ಕರ್‌ ಇದೇ ಮೊದಲ ಬಾರಿಗೆ ಮುಂಬೈ ಸೀನಿಯರ್‌ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಅರ್ಜುನ್‌ ತೆಂಡೂಲ್ಕರ್‌ ಮುಂಬರುವ ಸೈಯದ್‌ ಮುಶ್ತಾಕ್‌ ಆಲಿ ಟ್ರೋಫಿಯಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಲಿದ್ದಾರೆ.‌

ಎಡಗೈ ವೇಗದ ಬೌಲರ್‌ ಆಗಿರುವ ಅರ್ಜುನ್‌ ತೆಂಡೂಲ್ಕರ್‌ ಈ ಹಿಂದೆ ಭಾರತದ ಅಂಡರ್‌ 19 ತಂಡವನ್ನು ಪ್ರತಿನಿಧಿಸಿದ್ದು, ಆ ಬಳಿಕ ಮಹಾರಾಷ್ಟ್ರದ ಸ್ಥಳೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇದೀಗ ಇದೇ ಮೊದಲ ಬಾರಿಗೆ ಸೀನಿಯರ್ಸ್‌ ತಂಡವನ್ನು ಸೇರಿಕೊಳ್ಳುವ ಅವಕಾಶ ಅವರಿಗೆ ಒದಗಿ ಬಂದಿದೆ.

ಜನವರಿ 10 ರಿಂದ ಆರಂಭವಾಗಲಿರುವ ಸೈಯಸ್‌ ಮುಶ್ತಾಕ್‌ ಟೂರ್ನಿಯಲ್ಲಿ ಪ್ರತಿ ತಂಡಕ್ಕೂ 20 ಮಂದಿ ಆಟಗಾರರನ್ನು ಸೇರ್ಪಡೆ ಮಾಡಿಕೊಳ್ಳುವಂತೆ ಬಿಸಿಸಿಐ ಮೊದಲು ಸೂಚಿಸಿತ್ತು. ಆ ಬಳಿಕ ನಿಯಮದಲ್ಲಿ ಬದಲಾವಣೆ ಮಾಡಿ 22 ಆಟಗಾರರ ಸೇರ್ಪಡೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ಹಿನ್ನಲೆಯಲ್ಲಿ ಅರ್ಜುನ್‌ ತೆಂಡೂಲ್ಕರ್‌ ಹಾಗೂ ಕೃತಿಕ್‌ ಅನಗವಾಡಿ ಮುಂಬೈ ತಂಡವನ್ನು ಸೇರಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...