
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ – ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿ ಹೆಣ್ಣು ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ ಅನ್ನೋ ವಿಚಾರ ಎಲ್ಲರಿಗೂ ತಿಳಿದೇ ಇದೆ. ಸದ್ಯ ಇಂಗ್ಲೆಂಡ್ ವಿರುದ್ಧ ಟಿ 20 ಸರಣಿಯಲ್ಲಿ ಬ್ಯುಸಿ ಇರುವ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯಾ ದಂಪತಿ ತಮ್ಮ ಮಕ್ಕಳ ಸಮೇತ ಹೋಟೆಲ್ನಲ್ಲಿ ನೆಲೆಸಿದ್ದಾರೆ.
ಅಹಮದಾಬಾದ್ನ ಯಾವ ಹೋಟೆಲ್ನಲ್ಲಿ ಈ ಪರಿವಾರ ನೆಲೆಸಿದ್ಯೋ ಅಲ್ಲಿ ಅವರಿಗಾಗಿ ವಿಶೇಷ ವ್ಯವಸ್ಥೆಯನ್ನ ಮಾಡಲಾಗಿದೆ. ವಿರಾಟ್ ಕೊಹ್ಲಿ ತಮ್ಮ ಹೋಟೆಲ್ ರೂಂನ ನೇಮ್ ಪ್ಲೇಟ್ನಲ್ಲಿ ತಮ್ಮ ಮಗಳು ವಮಿಕಾಳ ಹೆಸರನ್ನ ಎಲ್ಲಕ್ಕಿಂತ ಮೊದಲು ಬರೆಸಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯಾ ತಮ್ಮ ಹಾಗೂ ಪತ್ನಿ ನತಾಶಾ ಹೆಸರಿನ ಬಳಿಕ ಅಗಸ್ತ್ಯನ ಹೆಸರನ್ನ ಬರೆಸಿದ್ದಾರೆ.
ಟೀಂ ಇಂಡಿಯಾ ಆಟಗಾರರು ನೆಲೆಸಿರುವ ಹೋಟೆಲ್ನಲ್ಲಿ ಆಟಗಾರರಿಗಾಗಿ ವಿಶೇಷ ವ್ಯವಸ್ಥೆಯನ್ನೂ ಮಾಡಲಾಗಿದೆ. ಯಾವ ಕ್ರಿಕೆಟ್ ಆಟಗಾರ ದಂಪತಿಗೆ ಮಗು ಇದೆಯೋ ಅಂತಹ ರೂಮ್ಗಳಲ್ಲಿ ಮಕ್ಕಳಿಗೆ ಆಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಉಳಿದ ಆಟಗಾರ ದಂಪತಿ ಬಗ್ಗೆ ಮಾತನಾಡೋದಾದ್ರೆ ಚಹಲ್ – ಧನಶ್ರೀ ಹಾಗೂ ಸೂರ್ಯಕುಮಾರ್ – ದೇವಿಷಾ ಕೂಡ ಇಲ್ಲಿ ತಂಗಿದ್ದಾರೆ. ಇವರಿಗೂ ಕೂಡ ಹೋಟೆಲ್ ಕೋಣೆಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.
