alex Certify ಅಪಘಾತದಲ್ಲಿ ಮೃತಪಟ್ಟ ಆಂಡ್ರ್ಯೂ ಸೈಮಂಡ್ಸ್, ಅಭಿಮಾನಿಗಳು ಎಂದಿಗೂ ಮರೆಯದ 5 ವಿವಾದಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಘಾತದಲ್ಲಿ ಮೃತಪಟ್ಟ ಆಂಡ್ರ್ಯೂ ಸೈಮಂಡ್ಸ್, ಅಭಿಮಾನಿಗಳು ಎಂದಿಗೂ ಮರೆಯದ 5 ವಿವಾದಗಳು

ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಈಶಾನ್ಯ ಆಸ್ಟ್ರೇಲಿಯಾದ ಟೌನ್ಸ್‌ ವಿಲ್ಲೆ ಬಳಿ ನಡೆದ ಕಾರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಅವರು 2000 ರ ದಶಕದಲ್ಲಿ ಆಸ್ಟ್ರೇಲಿಯಾದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರು. ಸೈಮಂಡ್ಸ್ ಆಸ್ಟ್ರೇಲಿಯನ್ ಕ್ರಿಕೆಟ್ ಕಂಡ ಅತ್ಯಂತ ನುರಿತ ಆಲ್-ರೌಂಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟವರು, ಆದರೆ, ಅವರು 2008 ರಲ್ಲಿ ಕುಖ್ಯಾತ ಮಂಕಿಗೇಟ್ ಹಗರಣ ಮತ್ತು ಇತರ ವಿವಾದಗಳಿಂದಾಗಿಯೂ ಅವರು ನೆನಪಾಗುತ್ತಾರೆ.

ಮಂಕಿಗೇಟ್ ಘಟನೆ

2008 ರಲ್ಲಿ ಆಸ್ಟ್ರೇಲಿಯಾದಲ್ಲಿ ಮಂಕಿಗೇಟ್ ಘಟನೆ ಸಂಭವಿಸಿತು. 2008 ರಲ್ಲಿ ಸಿಡ್ನಿಯಲ್ಲಿ ನಡೆದ ಟೆಸ್ಟ್‌ ನಲ್ಲಿ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ‘ಮಂಕಿ’ ಎಂದು ಕರೆದಿದ್ದಾರೆ ಎಂದು ಸೈಮಂಡ್ಸ್ ಆರೋಪಿಸಿದರು. ಇದು ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ವಿವಾದವಾಗಿ ಹರ್ಭಜನ್ ಅವರನ್ನು ಒಂದು ಟೆಸ್ಟ್‌ ಪಂದ್ಯದಿಂದ ನಿಷೇಧಿಸಲಾಗಿತ್ತು.

ಸೈಮಂಡ್ಸ್ ಮತ್ತು ಮೈಕೆಲ್ ಕ್ಲಾರ್ಕ್

2008 ರಲ್ಲಿ ಡಾರ್ವಿನ್‌ ನಲ್ಲಿ ಬಾಂಗ್ಲಾದೇಶದ ವಿರುದ್ಧದ ODI ಸರಣಿಯಿಂದ ಸೈಮಂಡ್ಸ್ ಮನೆಗೆ ಕಳುಹಿಸಲ್ಪಟ್ಟಾಗ ಸೈಮಂಡ್ಸ್ ಉಪನಾಯಕತ್ವಕ್ಕೆ ಕ್ಲಾರ್ಕ್‌ ನ ಏರಿಕೆಯ ನಂತರ ಇಬ್ಬರೂ ಬೇರ್ಪಟ್ಟರು. ತಂಡದ ಸಭೆಯಲ್ಲಿ ಪಾಲ್ಗೊಳ್ಳುವ ಬದಲು ಮೀನುಗಾರಿಕೆಗೆ ಹೋಗಲು ಸೈಮಂಡ್ಸ್ ಆದ್ಯತೆ ನೀಡಿದ್ದರು. ವರ್ಷಗಳ ನಂತರ, 2008 ರಲ್ಲಿ ಪಾಡ್‌ ಕ್ಯಾಸ್ಟ್‌ ನಲ್ಲಿ, ಸೈಮಂಡ್ಸ್ ಅವರು IPL ನಲ್ಲಿ ಡೆಕ್ಕನ್ ಚಾರ್ಜರ್ಸ್‌ ನಿಂದ 5.40 ಕೋಟಿ ರೂ. ಸ್ವೀಕರಿಸಿದ ಬೃಹತ್ ಮೊತ್ತ ಅವರ ಬದಲಾದ ಸಂಬಂಧದ ಹಿಂದೆ ಕಾರಣವಾಗಿರಬಹುದು ಎಂದು ಬಹಿರಂಗಪಡಿಸಿದರು.

ಮದ್ಯದ ಸಮಸ್ಯೆಗಳು

2005ರಲ್ಲಿ ಕಾರ್ಡಿಫ್‌ನಲ್ಲಿ ಬಾಂಗ್ಲಾದೇಶದ ವಿರುದ್ಧದ ತ್ರಿಕೋನ ಸರಣಿಯ ಪಂದ್ಯಕ್ಕೆ ಮುನ್ನ ಸೈಮಂಡ್ಸ್‌ ರನ್ನು ಆಸ್ಟ್ರೇಲಿಯನ್ ತಂಡದಿಂದ ಕೈಬಿಡಲಾಯಿತು. ಹಿಂದಿನ ಸಂಜೆ ಅವರು ಮದ್ಯ ಸೇವಿಸಿದ್ದರಿಂದ ಈ ನಿರ್ಧಾರಕ್ಕೆ ಕೈಗೊಳ್ಳಲಾಗಿತ್ತು.

ಕ್ರಿಕೆಟ್ ವೃತ್ತಿ

ಸೈಮಂಡ್ಸ್ ಕ್ರಿಕೆಟ್ ಜಗತ್ತಿನಲ್ಲಿ ಅವರ ವೃತ್ತಿಜೀವನದ ಅವಧಿಯಲ್ಲಿ ಹಲವಾರು ವಿವಾದಗಳನ್ನು ಹೊಂದಿದ್ದರೂ, ಅವರ ಹೆಸರು ವಿಶ್ವದ ಶ್ರೇಷ್ಠ ಆಲ್-ರೌಂಡರ್‌ಗಳಲ್ಲಿ ಒಂದಾಗಿದೆ. ಆಂಡ್ರ್ಯೂ ಸೈಮಂಡ್ಸ್ ಆಸ್ಟ್ರೇಲಿಯಾ ಪರ 26 ಟೆಸ್ಟ್, 198 ODI ಮತ್ತು 14 T20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 1462 ರನ್, ಟೆಸ್ಟ್‌ ನಲ್ಲಿ 5088 ಮತ್ತು ಟಿ20ಯಲ್ಲಿ 337 ರನ್ ಗಳಿಸಿದ್ದಾರೆ. ಆಂಡ್ರ್ಯೂ ಸೈಮಂಡ್ಸ್ 39 ಐಪಿಎಲ್ ಪಂದ್ಯಗಳನ್ನು ಕೂಡ ಆಡಿದ್ದಾರೆ.

ಟ್ವೆಂಟಿ20 ತಂಡದಿಂದ ಹೊರಕ್ಕೆ

ಜೂನ್ 2009 ರಲ್ಲಿ, ಆಂಡ್ರ್ಯೂ ಸೈಮಂಡ್ಸ್ ಅವರು ಆಸ್ಟ್ರೇಲಿಯನ್ ತಂಡದಲ್ಲಿದ್ದಾಗ ಶಿಸ್ತಿನ ಉಲ್ಲಂಘನೆಯ ನಂತರ ಟ್ವೆಂಟಿ20 ವಿಶ್ವಕಪ್‌ ನಿಂದ ಮನೆಗೆ ಕಳುಹಿಸಲ್ಪಟ್ಟರು. ಅವರ ವಿವಾದಿತ ನಡವಳಿಕೆಯಿಂದ ಬೃಹತ್ ಕ್ರಿಕೆಟ್ ಪ್ರತಿಭೆಯನ್ನು ದುರ್ಬಲಗೊಂಡಿತು. ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...