ಚೆನ್ನೈ: ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಉಪ ನಾಯಕ ಅಜಿಂಕ್ಯ ರಹಾನೆ ಚೆನ್ನೈನಲ್ಲಿ ತಮ್ಮ ಮೊದಲ ದಿನದ ಕ್ವಾರಂಟೈನ್ ನಲ್ಲಿ ಮಗಳ ಜತೆ ಕಾಲ ಕಳೆದಿದ್ದಾರೆ.
ಇಂಗ್ಲೆಂಡ್ ಜತೆಗಿನ ಟೆಸ್ಟ್ ಗಾಗಿ ಅವರು ಚೆನ್ನೈ ತಲುಪಿದ್ದಾರೆ. ರಹಾನೆ ಪತ್ನಿ ರಾಧಿಕಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪತಿ ಮಗಳ ಜತೆ ಆಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. “ಮೈ ಎಂಟರ್ಟೈನ್ಮೆಂಟ್ ಇನ್ ಕ್ವಾರಂಟೈನ್” ಎಂದು ಬರೆದಿದ್ದಾರೆ.
ಜಾಕಿಚಾನ್ ಜತೆ ಇರುವ ಫೋಟೋ ಶೇರ್ ಮಾಡಿದ ಬಾಲಿವುಡ್ ಬೆಡಗಿ ದಿಶಾ ಪಠಾಣಿ
ಆಸ್ಟ್ರೇಲಿಯಾ ಪ್ರವಾಸದ ಬಳಿಕ ಭಾರತೀಯ ಕ್ರಿಕೆಟ್ ತಂಡ ಬುಧವಾರ ಚೆನ್ನೈ ತಲುಪಿದೆ. ಮೊಹಮದ್ ಸಿರಾಜ್ ಹಾಗೂ ಚೇತೇಶ್ವರ ಪೂಜಾರ ಅವರು ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
https://www.instagram.com/p/CKiZFiNAu1-/?utm_source=ig_web_copy_link