
ಐತಿಹಾಸಿಕ ಸಾಧನೆಯನ್ನ ಸಂಭ್ರಮಿಸೋಕೆ ಅಭಿಮಾನಿಗಳು ಹಾಗೂ ಸ್ಥಳೀಯರು ಕಾಂಗರೂ ಆಕೃತಿಯ ಕೇಕ್ನ್ನ ರಹಾನೆ ಕೈಯಲ್ಲಿ ಕತ್ತರಿಸೋಕೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈ ಕೇಕ್ ಕತ್ತರಿಸಲು ರಹಾನೆ ನಿರಾಕರಿಸಿದ್ದಾರೆ.
ಸ್ಥಳೀಯ ಮಾಧ್ಯಮದಲ್ಲಿ ಈ ಘಟನೆ ನೇರ ಪ್ರಸಾರ ಕಂಡಿದೆ. ಇದರಲ್ಲಿ ರಹಾನೆ ತಮ್ಮ ಮಗಳನ್ನ ಎತ್ತಿಕೊಂಡಿದ್ದಾರೆ. ಅವರ ಎದುರಲ್ಲಿ ಕಾಂಗರೂ ಆಕೃತಿಯ ಕೇಕ್ ಇರೋದನ್ನ ಕಾಣಬಹುದಾಗಿದೆ. ಕ್ರಿಕೆಟ್ ಮೈದಾನದ ಮೇಲೆ ಕುಳಿತ ಕಾಂಗರೂ ಭಾರತದ ಬಾವುಟವನ್ನ ಹಿಡಿದಿರುವ ರೀತಿಯಲ್ಲಿ ಕೇಕ್ನ್ನು ವಿನ್ಯಾಸಗೊಳಿಸಲಾಗಿತ್ತು.
ಈ ಕೇಕ್ ನ್ನ ಚೆಫ್ ಬೇಕರಿ ಮುಖ್ಯಸ್ಥೆ ಅದಿತಿ ಲಿಮಾಯೆ ಕಾಮನ್ ಎಂಬವರು ವಿನ್ಯಾಸಗೊಳಿಸಿದ್ದರು. ಅವರ ಬ್ಯುಸಿನೆಸ್ ಪಾರ್ಟ್ನರ್ ಹಾಗೂ ಮಾಜಿ ರಣಜಿ ಆಟಗಾರ ಜೀತೇಂದ್ರ ಠಾಕ್ರೆ ನೀಡಿದ ಐಡಿಯಾದಂತೆ ಈ ಕೇಕ್ನ್ನ ವಿನ್ಯಾಸಗೊಳಿಸಲಾಗಿತ್ತು. ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿಗೆ ಗೌರವ ತೋರಿದ ಅಜಿಂಕ್ಯ ರಹಾನೆ ಕ್ರಮಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆಗಳ ಸುರಿಮಳೆಯೇ ಹರಿದು ಬರ್ತಿದೆ.