
ಟೀಂ ಇಂಡಿಯಾ ತಂಡದ ಸದಸ್ಯನಾಗಿ ಟಿ 20 ಸರಣಿ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಟಿ. ನಟರಾಜನ್ ಟ್ವಿಟರ್ನಲ್ಲಿ ತಮ್ಮ ಸಂತಸವನ್ನ ಹೊರಹಾಕಿದ್ದಾರೆ. ಟೀಂ ಇಂಡಿಯಾ ಜೊತೆಗಿನ ನನ್ನ ಮೊದಲ ಪ್ರವಾಸ ಇದಾಗಿತ್ತು, ನಾವು ಟಿ 20 ಸರಣಿಯನ್ನ ಗೆದ್ದಿದ್ದೇವೆ. ಈ ಮೂಲಕ ನನ್ನ ಕನಸು ನನಸಾದಂತಾಗಿದೆ. ನಮ್ಮ ತಂಡದ ಆಟಗಾರರ ನಿರಂತರ ಬೆಂಬಲ ಹಾಗೂ ಪ್ರೋತ್ಸಾಹಕ್ಕೆ ನಾನು ಧನ್ಯವಾದ ಅರ್ಪಿಸುವೆ ಎಂದು ಬರೆದುಕೊಂಡಿದ್ದಾರೆ.
ಎಡಗೈ ವೇಗಿ ಟಿ. ನಟರಾಜನ್ 2020ರ ಐಪಿಎಲ್ ಆವೃತ್ತಿಯಲ್ಲಿ ಹೈದರಾಬಾದ್ ತಂಡವನ್ನ ಪ್ರತಿನಿಧಿಸಿದ್ದರು. ಐಪಿಎಲ್ ಭರ್ಜರಿ ಪ್ರದರ್ಶನ ನೀಡಿದ ಕಾರಣ ಗಾಯಾಳು ಭುವನೇಶ್ವರ್ ಕುಮಾರ್ ಜಾಗಕ್ಕೆ ನಟರಾಜನ್ರನ್ನ ಸೇರಿಸಿಕೊಳ್ಳಲಾಗಿತ್ತು. ಸಿಕ್ಕ ಅವಕಾಶವನ್ನ ಸೂಕ್ತವಾಗಿ ಬಳಸಿಕೊಂಡ ನಟರಾಜನ್ ಎರಡನೇ ಪಂದ್ಯದಲ್ಲಿ ಎರಡು ವಿಕೆಟ್ ಸೇರಿದಂತೆ ಸಂಪೂರ್ಣ ಸರಣಿಯಲ್ಲಿ 6 ವಿಕೆಟ್ ಪಡೆದಿದ್ದು ಮಾತ್ರವಲ್ಲದೇ ಎದುರಾಳಿ ತಂಡಕ್ಕೆ ರನ್ ಗಳಿಸಲು ಸಾಧ್ಯವಾಗದಂತೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು.