alex Certify 25ರ ಹರೆಯದಲ್ಲೇ ಟೆನ್ನಿಸ್​​ ಗೆ ವಿದಾಯ ಘೋಷಿಸಿದ ವಿಶ್ವದ ನಂಬರ್​ 1 ಆಟಗಾರ್ತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

25ರ ಹರೆಯದಲ್ಲೇ ಟೆನ್ನಿಸ್​​ ಗೆ ವಿದಾಯ ಘೋಷಿಸಿದ ವಿಶ್ವದ ನಂಬರ್​ 1 ಆಟಗಾರ್ತಿ…!

ವಿಶ್ವದ ನಂಬರ್​ 1 ಆಟಗಾರ್ತಿ ಆಶ್ಲೀಗ್​ ಬಾರ್ಟಿ ತಮ್ಮ 25ನೇ ವಯಸ್ಸಿನಲ್ಲಿ ಟೆನ್ನಿಸ್​​ಗೆ ವಿದಾಯ ಘೋಷಿಸುವ ಮೂಲಕ ಕ್ರೀಡಾಭಿಮಾನಿಗಳನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದ್ದಾರೆ.

ಕಳೆದ 44 ವರ್ಷಗಳಲ್ಲಿ ಆಸ್ಟ್ರೇಲಿಯನ್​ ಓಪನ್​ ಟೆನ್ನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ಪ್ರಶಸ್ತಿ ಬಾಚುವ ಮೂಲಕ ತವರಿನಲ್ಲಿ ಸಾಧನೆಗೈದಿದ್ದ ಆಟಗಾರ್ತಿ ಇದೀಗ ಟೆನ್ನಿಸ್​ ಲೋಕಕ್ಕೆ ವಿದಾಯ ಹೇಳಿದ್ದಾರೆ.

ಇಂದು ನಾನು ಅತ್ಯಂತ ಕಷ್ಟದಿಂದ ಹಾಗೂ ಭಾವುಕತೆಯಿಂದ ಟೆನ್ನಿಸ್​ ಲೋಕಕ್ಕೆ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಆಶ್ಲೀಗ್​ ಬಾರ್ಟಿ ಹೇಳಿದ್ದಾರೆ.
ತನ್ನ ಆಪ್ತ ಸ್ನೇಹಿತ ಹಾಗೂ ಮಾಜಿ ಡಬಲ್ಸ್​ ಪಾರ್ಟ್ನರ್​​ ಕೇಸಿ ಡೆಲಕ್ವಾ ತಮ್ಮ ಕಣ್ಣೀರಿನ ವಿಡಿಯೋದಲ್ಲಿ ಈ ಕ್ರೀಡೆಯೂ ನನಗೆ ನೀಡಿದ ಎಲ್ಲದಕ್ಕೂ ಧನ್ಯವಾದ ಎಂದು ಹೇಳಿದ್ದಾರೆ.

“ನಾನು ತುಂಬಾ ಸಂತೋಷವಾಗಿದ್ದೇನೆ ಮತ್ತು ನಾನು ತುಂಬಾ ಸಿದ್ಧನಾಗಿದ್ದೇನೆ ಮತ್ತು ಒಬ್ಬ ವ್ಯಕ್ತಿಯಾಗಿ ನನ್ನ ಹೃದಯದಲ್ಲಿ ಈ ಕ್ಷಣದಲ್ಲಿ ನನಗೆ ತಿಳಿದಿದೆ, ಇದು ಸರಿ. ಟೆನಿಸ್ ನನಗೆ ನೀಡಿದ ಎಲ್ಲದಕ್ಕೂ ನಾನು ತುಂಬಾ ಕೃತಜ್ಞನಾಗಿದ್ದೇನೆ, ಅದು ನನಗೆ ನನ್ನ ಎಲ್ಲವನ್ನೂ ನೀಡಿದೆ ಎಂದು ಹೇಳಿದ್ದಾರೆ.

ಬಾರ್ಟಿ ಎರಡು ವರ್ಷಗಳಿಗೂ ಹೆಚ್ಚು ಕಾಲ ವಿಶ್ವದ ನಂಬರ್ ಒನ್ ಟನ್ನಿಸ್​ ಆಟಗಾರ್ತಿ ಆಗಿದ್ದಾರೆ ಮತ್ತು ಮೂರು ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

https://www.instagram.com/tv/Cbbbr7xBX7N/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...