ವಿಶ್ವದ ನಂಬರ್ 1 ಆಟಗಾರ್ತಿ ಆಶ್ಲೀಗ್ ಬಾರ್ಟಿ ತಮ್ಮ 25ನೇ ವಯಸ್ಸಿನಲ್ಲಿ ಟೆನ್ನಿಸ್ಗೆ ವಿದಾಯ ಘೋಷಿಸುವ ಮೂಲಕ ಕ್ರೀಡಾಭಿಮಾನಿಗಳನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದ್ದಾರೆ.
ಕಳೆದ 44 ವರ್ಷಗಳಲ್ಲಿ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಬಾಚುವ ಮೂಲಕ ತವರಿನಲ್ಲಿ ಸಾಧನೆಗೈದಿದ್ದ ಆಟಗಾರ್ತಿ ಇದೀಗ ಟೆನ್ನಿಸ್ ಲೋಕಕ್ಕೆ ವಿದಾಯ ಹೇಳಿದ್ದಾರೆ.
ಇಂದು ನಾನು ಅತ್ಯಂತ ಕಷ್ಟದಿಂದ ಹಾಗೂ ಭಾವುಕತೆಯಿಂದ ಟೆನ್ನಿಸ್ ಲೋಕಕ್ಕೆ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಆಶ್ಲೀಗ್ ಬಾರ್ಟಿ ಹೇಳಿದ್ದಾರೆ.
ತನ್ನ ಆಪ್ತ ಸ್ನೇಹಿತ ಹಾಗೂ ಮಾಜಿ ಡಬಲ್ಸ್ ಪಾರ್ಟ್ನರ್ ಕೇಸಿ ಡೆಲಕ್ವಾ ತಮ್ಮ ಕಣ್ಣೀರಿನ ವಿಡಿಯೋದಲ್ಲಿ ಈ ಕ್ರೀಡೆಯೂ ನನಗೆ ನೀಡಿದ ಎಲ್ಲದಕ್ಕೂ ಧನ್ಯವಾದ ಎಂದು ಹೇಳಿದ್ದಾರೆ.
“ನಾನು ತುಂಬಾ ಸಂತೋಷವಾಗಿದ್ದೇನೆ ಮತ್ತು ನಾನು ತುಂಬಾ ಸಿದ್ಧನಾಗಿದ್ದೇನೆ ಮತ್ತು ಒಬ್ಬ ವ್ಯಕ್ತಿಯಾಗಿ ನನ್ನ ಹೃದಯದಲ್ಲಿ ಈ ಕ್ಷಣದಲ್ಲಿ ನನಗೆ ತಿಳಿದಿದೆ, ಇದು ಸರಿ. ಟೆನಿಸ್ ನನಗೆ ನೀಡಿದ ಎಲ್ಲದಕ್ಕೂ ನಾನು ತುಂಬಾ ಕೃತಜ್ಞನಾಗಿದ್ದೇನೆ, ಅದು ನನಗೆ ನನ್ನ ಎಲ್ಲವನ್ನೂ ನೀಡಿದೆ ಎಂದು ಹೇಳಿದ್ದಾರೆ.
ಬಾರ್ಟಿ ಎರಡು ವರ್ಷಗಳಿಗೂ ಹೆಚ್ಚು ಕಾಲ ವಿಶ್ವದ ನಂಬರ್ ಒನ್ ಟನ್ನಿಸ್ ಆಟಗಾರ್ತಿ ಆಗಿದ್ದಾರೆ ಮತ್ತು ಮೂರು ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
https://www.instagram.com/tv/Cbbbr7xBX7N/?utm_source=ig_web_copy_link