alex Certify ಸುರೇಶ್‌ ರೈನಾಗೆ CSK ತಂಡದಿಂದ ‌ʼಬಿಗ್‌ ಶಾಕ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುರೇಶ್‌ ರೈನಾಗೆ CSK ತಂಡದಿಂದ ‌ʼಬಿಗ್‌ ಶಾಕ್ʼ

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭರವಸೆ ಆಟಗಾರನಾಗಿದ್ದ ಸುರೇಶ್ ರೈನಾ ಸಮಯ ಸರಿಯಾಗಿಲ್ಲ. ಸುರೇಶ್ ರೈನಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಧ್ಯೆ ಸಂಬಂಧ ಹಳಸಿದಂತಿದೆ. ಸುರೇಶ್ ರೈನಾ ತಂಡಕ್ಕೆ ವಾಪಸ್ ಆಗ್ತಾರೆ ಎನ್ನಲಾಗ್ತಿತ್ತು. ಆದ್ರೆ ಈಗಿನ ಬೆಳವಣಿಗೆ ಇದನ್ನು ಮತ್ತಷ್ಟು ಕಠಿಣಗೊಳಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಾಟ್ಸಾಪ್ ಗ್ರೂಪ್ ನಿಂದ ಸುರೇಶ್ ರೈನಾ ಹೆಸರನ್ನು ತೆಗೆದು ಹಾಕಲಾಗಿದೆ.‌ ಮೂಲಗಳ ಪ್ರಕಾರ, ಸುರೇಶ್ ರೈನಾ, ಸಿಎಸ್ಕೆ ವಾಟ್ಸಾಪ್ ಗ್ರೂಪ್ ನಲ್ಲಿಲ್ಲ. ಆದ್ರೆ ಯಾರು ಈ ಕೆಲಸ ಮಾಡಿದ್ದಾರೆಂಬುದು ಬಹಿರಂಗವಾಗಿಲ್ಲ. ಸುರೇಶ್ ರೈನಾ, ನಾಯಕ ಧೋನಿ ಹಾಗೂ ತಂಡದ ಸಿಇಒ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ರೈನಾ ಭಾರತಕ್ಕೆ ವಾಪಸ್ ಬರ್ತಿದ್ದಂತೆ ತಂಡದ ಮಾಲೀಕ ಶ್ರೀನಿವಾಸನ್ ಹರಿಹಾಯ್ದಿದ್ದರು. ನಂತ್ರ ಸುರೇಶ್ ರೈನಾ, ವೈಯಕ್ತಿಕ ಕಾರಣಕ್ಕೆ ವಾಪಸ್ ಬಂದಿರುವುದಾಗಿ ಹೇಳಿದ್ದರು. ಇದಾದ್ಮೇಲೆ ಶ್ರೀನಿವಾಸನ್ ಮಾತು ಬದಲಿಸಿದ್ದರು. ತಂಡಕ್ಕೆ ರೈನಾ ಮರಳುವ ನಿರ್ಧಾರವನ್ನು ಧೋನಿ ಮೇಲೆ ಹಾಕಿದ್ದರು. ಧೋನಿ ಈ ಬಗ್ಗೆ ತಂಡದ ಜೊತೆ ಮಾತನಾಡ್ತಿದ್ದಾರೆ ಎಂದು ವರದಿಯಾಗಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...