ನಿನ್ನೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಐಪಿಎಲ್ ನ 23 ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಜಾನಿ ಬೈರ್ ಸ್ಟೋ 7ರನ್ ಗಳಿಸಿ, ಸ್ಯಾಮ್ ಕರನ್ ಬೌಲಿಂಗ್ ನಲ್ಲಿ ಔಟಾದರು. ನಾಯಕ ಡೇವಿಡ್ ವಾರ್ನರ್ (57) ಹಾಗೂ ಮನೀಷ್ ಪಾಂಡೆ 46(61) ರನ್ ಬಾರಿಸುವ ಮೂಲಕ ಉತ್ತಮ ಜೊತೆಯಾಟವಾಡಿದರು. ನಂತರ ಲುಂಗಿ ಎನ್ಗಿಡಿ ಬೌಲಿಂಗ್ನಲ್ಲಿ ಈ ಇಬ್ಬರು ಬ್ಯಾಟ್ಸ್ಮನ್ ಗಳು ತಮ್ಮ ವಿಕೆಟ್ ಒಪ್ಪಿಸಿದರು. ಒಟ್ಟಾರೆ ಸನ್ ರೈಸರ್ಸ್ ಹೈದರಾಬಾದ್ ತಂಡ 3 ವಿಕೆಟ್ ನಷ್ಟಕ್ಕೆ 171ರನ್ ಗಳ ಮೊತ್ತ ದಾಖಲಿಸಿತು.
ಈ ದಾಖಲೆಗಳನ್ನು ಮಾಡಲು ಸಜ್ಜಾಗಿದ್ದಾರೆ ಡೇವಿಡ್ ವಾರ್ನರ್
ಗುರಿ ಬೆನ್ನತ್ತಿದ ಚೆನ್ನೈ ಸೂಪರ್ಕಿಂಗ್ಸ್ ಆರಂಭದಲ್ಲಿ ಋತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡು ಪ್ಲೆಸಿಸ್ ಭರ್ಜರಿ ಜೊತೆಯಾಟವಾಡಿದರು ಋತುರಾಜ್ ಗಾಯಕ್ವಾಡ್ 44 ಎಸೆತಗಳಲ್ಲಿ 75ರನ್ ಗಳಿಸಿದ್ದು, ರಶೀದ್ ಖಾನ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಮೋಯಿನ್ ಅಲಿ 15ರನ್ ಗಳಿಸಿ ರಶೀದ್ ಖಾನ್ ಬೌಲಿಂಗ್ ನಲ್ಲಿ ಔಟಾದರೇ ಫಾಫ್ ಡು ಪ್ಲೆಸಿಸ್ ಕೂಡ 56ರನ್ ಗಳಿಸಿದ್ದು ಅದೇ ಓವರ್ ನಲ್ಲಿ ರಶೀದ್ ಖಾನ್ ಗೆ ತಮ್ಮ ವಿಕೆಟ್ ಒಪ್ಪಿಸಿದರು.
ನಂತರ ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್ ಗಿಳಿದಿದ್ದು, ಚೆನ್ನೈ ಸೂಪರ್ಕಿಂಗ್ಸ್ ತಂಡ 18.3 ಓವರ್ ನಲ್ಲಿ 173 ರನ್ ಗಳಿಸುವ ಮೂಲಕ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.