alex Certify ರಿಷಭ್ ಪಂತ್ ತಾಯಿ, ಸಹೋದರಿ ವಿರುದ್ಧ ತನಿಖೆ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಷಭ್ ಪಂತ್ ತಾಯಿ, ಸಹೋದರಿ ವಿರುದ್ಧ ತನಿಖೆ ಆರಂಭ

ಭಾರತೀಯ ಕ್ರಿಕೆಟಿಗ ರಿಷಭ್ ಪಂತ್  ಕುಟುಂಬ ಈ ದಿನಗಳಲ್ಲಿ ಚರ್ಚೆಯಲ್ಲಿದೆ. ಪಂತ್ ಅವರ ತಾಯಿ ಮತ್ತು ಸಹೋದರಿಯ ವಿರುದ್ಧ ಅವರ ಹೋಟೆಲ್‌ನಲ್ಲಿ ಕೆಲಸ ಮಾಡುವ ಅಡುಗೆಯವರು ದೂರು ದಾಖಲಿಸಿದ್ದಾರೆ. ಪಂತ್ ಅವರ ಕುಟುಂಬ ದೆಹಲಿ-ಹರಿದ್ವಾರ ಹೆದ್ದಾರಿಯಲ್ಲಿ ರೆಸ್ಟೋರೆಂಟ್ ನಡೆಸುತ್ತಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಅಡುಗೆಯವರು ಆರೋಪ ಮಾಡಿದ್ದಾರೆ.

ಫೈಜ್ ಆಲಂ ಎಂಬ ಯುವಕ ಪಂತ್‌  ತಾಯಿ ಮತ್ತು ಸಹೋದರಿ ತನಗೆ ಎರಡು ತಿಂಗಳ ಸಂಬಳ ನೀಡಲಿಲ್ಲ ಎಂದಿದ್ದಾನೆ. ಸಂಬಳ ನೀಡುವಂತೆ ಕೇಳಿದ್ರೆ ಬೆದರಿಕೆ ಹಾಕಿದ್ದಾರೆಂದು ಆರೋಪ ಮಾಡಿದ್ದಾನೆ. ರಿಷಭ್ ಪಂತ್ ಅವರ ಸಹೋದರಿ ಸಾಕ್ಷಿ ಪಂತ್ ರೆಸ್ಟೋರೆಂಟ್ ನಲ್ಲಿ ಫೈಜ್ ಆಲಂ ಡಿಸೆಂಬರ್‌ನಲ್ಲಿ ಕೆಲಸ ಮಾಡಲು ಶುರು ಮಾಡಿದ್ದ.

9500 ರೂಪಾಯಿ ಸಂಬಳ ನಿಗದಿಪಡಿಸಲಾಗಿತ್ತು. ಆದರೆ ಡಿಸೆಂಬರ್ ನಂತರ ಜನವರಿ ಮತ್ತು ಫೆಬ್ರವರಿ ತಿಂಗಳ ಸಂಬಳ ನೀಡಲಾಗಿಲ್ಲ. ಮಾರ್ಚ್ 5 ರಂದು ಹೋಟೆಲ್ ಮುಚ್ಚುತ್ತಿದೆ ಎಂದು ತಿಳಿಸಲಾಯಿತು. ಫೈಜ್ ಎರಡು ತಿಂಗಳ ವೇತನ ನೀಡುವಂತೆ ಕೇಳಿದ್ದಾನೆ. ಆದ್ರೆ ಸಂಬಳ ನೀಡದೆ ಬೆದರಿಸಲಾಗಿದೆ ಎಂದು ಆತ ಅಲ್ಪಸಂಖ್ಯಾತ ಆಯೋಗಕ್ಕೆ ಪತ್ರ ಬರೆದಿದ್ದಾನೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...