alex Certify ರಿವರ್ಸ್ ಸ್ವೀಪ್​ ಮೂಲಕ ಇಂಗ್ಲೆಂಡ್​ ಬೌಲರ್​ಗೆ ಚಮಕ್​ ಕೊಟ್ಟ ರಿಷಬ್​ ಪಂತ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿವರ್ಸ್ ಸ್ವೀಪ್​ ಮೂಲಕ ಇಂಗ್ಲೆಂಡ್​ ಬೌಲರ್​ಗೆ ಚಮಕ್​ ಕೊಟ್ಟ ರಿಷಬ್​ ಪಂತ್…!

ಭಾರತ ಹಾಗೂ ಇಂಗ್ಲೆಂಡ್​ ನಡುವೆ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್​ ಮ್ಯಾಚ್​ನಲ್ಲಿ ಟೀಂ ಇಂಡಿಯಾ ಸಂಕಷ್ಟದಲ್ಲಿತ್ತು.

ಇಂಗ್ಲೆಂಡ್ ತಂಡದ ಬೌಲರ್​ಗಳು ಭಾರತೀಯ ಬ್ಯಾಟ್ಸ್​ಮನ್​​ಗಳ ಓಟಕ್ಕೆ ಲಗಾಮು ಹಾಕಿದ್ದರು. ರೋಹಿತ್​ ಶರ್ಮಾ ಹಾಗೂ ರಿಷಬ್​ ಪಂತ್​​ ಜೋಡಿ ಟೀಂ ಇಂಡಿಯಾ ರನ್​​ ಚೇತರಿಸಿಕೊಳ್ಳುವಲ್ಲಿ ನೆರವಾಯ್ತು.

ಈ ಮ್ಯಾಚ್​ನಲ್ಲಿ ರಿಷಬ್​ ಪಂತ್​ ಆಕರ್ಷಕ ಶತಕವನ್ನ ಸಿಡಿಸಿದ್ರು. ಈ ಶತಕದ ಆಟದಲ್ಲಿ ರಿಷಬ್​ ಪಂತ್​ ಇಂಗ್ಲೆಂಡ್​ ಬೌಲರ್​ ಜೇಮ್ಸ್ ಆಂಡರ್ಸನ್​​ಗೆ ಚಮಕ್​ ನೀಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರಿಷಬ್​ ಪಂತ್​ ತಮ್ಮ ಎದುರಾಳಿ ತಂಡದ ಬೌಲರ್​ ದಿಕ್ಕು ತಪ್ಪಿಸೋಕೆ ಏನಾದರೊಂದು ಕಾರ್ಯತಂತ್ರವನ್ನ ಮಾಡ್ತಾನೇ ಇರ್ತಾರೆ. ಬೌಲರ್​​ಗೆ ದಿಕ್ಕುತಪ್ಪಿಸಬೇಕು ಅಂತಾನೇ ತಮ್ಮ ಶಾಟ್​ಗಳನ್ನ ಬದಲು ಮಾಡ್ತಾನೇ ಇರ್ತಾರೆ.

ಇಂಗ್ಲೆಂಡ್ ವಿರುದ್ಧ ಇದೇ ತಂತ್ರವನ್ನ ಬಳಸಿದ ಪಂತ್​ ಯಶಸ್ವಿಯಾಗಿದ್ದಾರೆ. 118 ಬಾಲ್​ನಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್​ಗಳನ್ನ ಸಿಡಿಸುವ ಮೂಲಕ 101 ರನ್​ ಗಳಿಸಿದ್ದಾರೆ.

ಪಂತ್​ ಕ್ರೀಸ್​ಗೆ ಇಳಿದ ಸಂದರ್ಭದಲ್ಲಿ ಟೀಂ ಇಂಡಿಯಾ ರನ್​ ಕೊರತೆ ಅನುಭವಿಸುತ್ತಿತ್ತು. ತಂಡಕ್ಕೆ ರನ್​ ಸೇರಿಸಿಕೊಡ್ತಾ ಹೋದ ಪಂತ್​ ಅರ್ಧ ಶತಕವನ್ನ ಸಿಡಿಸಿದ್ರು. ಬಳಿಕ ಶತಕದತ್ತ ದಾಪುಗಾಲು ಹಾಕುತ್ತಾ ಹೋದ್ರು. ಪಂತ್​ ವೈಯಕ್ತಿಕ 89 ರನ್​ ಗಳಿಸಿದ್ದ ಸಂದರ್ಭದಲ್ಲಿ ಜೇಮ್ಸ್ ಆಂಡರ್ಸನ್​​ ಬಾಲ್​ ನೀಡಿದ ಶಾಟ್​ ಸದ್ಯ ಟಾಕ್​ ಆಫ್​ ದ ಟೌನ್​ ಆಗಿದೆ.

ಪಂತ್, ಆಂಡರ್ಸನ್​ ಬಾಲ್​ಗೆ ರಿವರ್ಸ್ ಸ್ವೀಪ್​ ಮಾಡಿದ್ರು ಹಾಗೂ ಈ ರಿವರ್ಸ್ ಸ್ವೀಪ್​ ಮೂಲಕ ಚೆಂಡನ್ನ ಬೌಂಡರಿ ಗೆರೆ ದಾಟಿಸುವಲ್ಲಿ ಯಶಸ್ವಿ ಕೂಡ ಆದ್ರು. ಆಂಡರ್ಸನ್​​ಗೆ  ಸರಿಯಾಗೇ ಚಮಕ್​ ಕೊಟ್ಟ ಈ ದೃಶ್ಯವನ್ನ ಕ್ರಿಕೆಟ್​ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿ ಪಂತ್​ ಬ್ಯಾಟಿಂಗ್​ ಶೈಲಿಯನ್ನ ಹಾಡಿಹೊಗಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...