ಭಾರತ ಹಾಗೂ ಇಂಗ್ಲೆಂಡ್ ನಡುವೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಮ್ಯಾಚ್ನಲ್ಲಿ ಟೀಂ ಇಂಡಿಯಾ ಸಂಕಷ್ಟದಲ್ಲಿತ್ತು.
ಇಂಗ್ಲೆಂಡ್ ತಂಡದ ಬೌಲರ್ಗಳು ಭಾರತೀಯ ಬ್ಯಾಟ್ಸ್ಮನ್ಗಳ ಓಟಕ್ಕೆ ಲಗಾಮು ಹಾಕಿದ್ದರು. ರೋಹಿತ್ ಶರ್ಮಾ ಹಾಗೂ ರಿಷಬ್ ಪಂತ್ ಜೋಡಿ ಟೀಂ ಇಂಡಿಯಾ ರನ್ ಚೇತರಿಸಿಕೊಳ್ಳುವಲ್ಲಿ ನೆರವಾಯ್ತು.
ಈ ಮ್ಯಾಚ್ನಲ್ಲಿ ರಿಷಬ್ ಪಂತ್ ಆಕರ್ಷಕ ಶತಕವನ್ನ ಸಿಡಿಸಿದ್ರು. ಈ ಶತಕದ ಆಟದಲ್ಲಿ ರಿಷಬ್ ಪಂತ್ ಇಂಗ್ಲೆಂಡ್ ಬೌಲರ್ ಜೇಮ್ಸ್ ಆಂಡರ್ಸನ್ಗೆ ಚಮಕ್ ನೀಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಿಷಬ್ ಪಂತ್ ತಮ್ಮ ಎದುರಾಳಿ ತಂಡದ ಬೌಲರ್ ದಿಕ್ಕು ತಪ್ಪಿಸೋಕೆ ಏನಾದರೊಂದು ಕಾರ್ಯತಂತ್ರವನ್ನ ಮಾಡ್ತಾನೇ ಇರ್ತಾರೆ. ಬೌಲರ್ಗೆ ದಿಕ್ಕುತಪ್ಪಿಸಬೇಕು ಅಂತಾನೇ ತಮ್ಮ ಶಾಟ್ಗಳನ್ನ ಬದಲು ಮಾಡ್ತಾನೇ ಇರ್ತಾರೆ.
ಇಂಗ್ಲೆಂಡ್ ವಿರುದ್ಧ ಇದೇ ತಂತ್ರವನ್ನ ಬಳಸಿದ ಪಂತ್ ಯಶಸ್ವಿಯಾಗಿದ್ದಾರೆ. 118 ಬಾಲ್ನಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್ಗಳನ್ನ ಸಿಡಿಸುವ ಮೂಲಕ 101 ರನ್ ಗಳಿಸಿದ್ದಾರೆ.
ಪಂತ್ ಕ್ರೀಸ್ಗೆ ಇಳಿದ ಸಂದರ್ಭದಲ್ಲಿ ಟೀಂ ಇಂಡಿಯಾ ರನ್ ಕೊರತೆ ಅನುಭವಿಸುತ್ತಿತ್ತು. ತಂಡಕ್ಕೆ ರನ್ ಸೇರಿಸಿಕೊಡ್ತಾ ಹೋದ ಪಂತ್ ಅರ್ಧ ಶತಕವನ್ನ ಸಿಡಿಸಿದ್ರು. ಬಳಿಕ ಶತಕದತ್ತ ದಾಪುಗಾಲು ಹಾಕುತ್ತಾ ಹೋದ್ರು. ಪಂತ್ ವೈಯಕ್ತಿಕ 89 ರನ್ ಗಳಿಸಿದ್ದ ಸಂದರ್ಭದಲ್ಲಿ ಜೇಮ್ಸ್ ಆಂಡರ್ಸನ್ ಬಾಲ್ ನೀಡಿದ ಶಾಟ್ ಸದ್ಯ ಟಾಕ್ ಆಫ್ ದ ಟೌನ್ ಆಗಿದೆ.
ಪಂತ್, ಆಂಡರ್ಸನ್ ಬಾಲ್ಗೆ ರಿವರ್ಸ್ ಸ್ವೀಪ್ ಮಾಡಿದ್ರು ಹಾಗೂ ಈ ರಿವರ್ಸ್ ಸ್ವೀಪ್ ಮೂಲಕ ಚೆಂಡನ್ನ ಬೌಂಡರಿ ಗೆರೆ ದಾಟಿಸುವಲ್ಲಿ ಯಶಸ್ವಿ ಕೂಡ ಆದ್ರು. ಆಂಡರ್ಸನ್ಗೆ ಸರಿಯಾಗೇ ಚಮಕ್ ಕೊಟ್ಟ ಈ ದೃಶ್ಯವನ್ನ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಪಂತ್ ಬ್ಯಾಟಿಂಗ್ ಶೈಲಿಯನ್ನ ಹಾಡಿಹೊಗಳಿದ್ದಾರೆ.