ಪಾಕಿಸ್ತಾನ ಕ್ರಿಕೆಟಿಗರಿಗೆ ಕೊರೊನಾ ವೈರಸ್ ಬಿಟ್ಟು ಬಿಡದೇ ಕಾಡುತ್ತಿದೆ. ಇತ್ತೀಚೆಗಷ್ಟೇ ಮೂವರು ಕ್ರಿಕೆಟಿಗರಿಗೆ ಕೊರೊನಾ ತಗುಲಿತ್ತು. ಇದೀಗ ಮತ್ತೆ 7 ಜನ ಕ್ರಿಕೆಟ್ ಆಟಗಾರರಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಆಟಗಾರರಾದ ಮಹಮ್ಮದ್ ಹಫೀಜ್, ವಹಾಬ್ ರಿಯಾಜ್, ಫಕರ್ ಜಮಾನ್, ಮಹಮದ್ ರಿಜ್ವಾನ್, ಇಮ್ರಾನ್ ಖಾನ್, ಹಸ್ನೈನ್, ಕಾಶಿಫ್ ಭಟ್ಟಿ ಸೋಂಕು ಪೀಡಿತರಾಗಿದ್ದು, ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲು ಸಿದ್ಧವಾಗಿದ್ದ ಪಾಕಿಸ್ತಾನ ತಂಡಕ್ಕೆ ಆಘಾತವಾಗಿದೆ.
ಈವರೆಗೆ ಪಾಕಿಸ್ತಾನದ ಒಟ್ಟು 10 ಮಂದಿ ಕ್ರಿಕೆಟಿಗರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಇಷ್ಟಾದರೂ ನಿಗದಿಯಂತೆ ಕ್ರಿಕೆಟ್ ಟೂರ್ನಿ ನಡೆಯಲಿದೆ ಎಂಬ ವಿಶ್ವಾಸವನ್ನು ಅಧಿಕಾರಿಗಳು ಹೊಂದಿದ್ದಾರೆ.