alex Certify ಧೋನಿ ತಂಡಕ್ಕೆ ವಾಪಸ್ ಆದ ಸ್ಟಾರ್ ಆಟಗಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿ ತಂಡಕ್ಕೆ ವಾಪಸ್ ಆದ ಸ್ಟಾರ್ ಆಟಗಾರ

ಸೆಪ್ಟೆಂಬರ್ 19 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿರುವ ಐಪಿಎಲ್ 13 ಋತುವಿನ ಆರಂಭಿಕ ಪಂದ್ಯದ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ತಂಡದ  ವೇಗದ ಬೌಲರ್ ದೀಪಕ್ ಚಹಾರ್ ತಂಡಕ್ಕೆ ವಾಪಸ್ ಆಗಿದ್ದಾರೆ. ಮೂರನೇ ಬಾರಿ ನಡೆದ ಕೋವಿಡ್ 19 ಪರೀಕ್ಷೆ ವರದಿ ನೆಗೆಟಿವ್ ಬಂದಿದೆ.

ನೆಗೆಟಿವ್ ವರದಿ ಬಂದ ನಂತ್ರ ದೀಪಕ್ ಚಹಾರ್ ಕೂಡ ತಂಡದೊಂದಿಗೆ  ಅಭ್ಯಾಸ ಆರಂಭಿಸಿದ್ದಾರೆ. ಈ ಮಾಹಿತಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ನೀಡಿದೆ.

ದುಬೈ ತಲುಪಿದ ಕೆಲವು ದಿನಗಳ ನಂತರ, ದೀಪಕ್ ಚಹಾರ್ ಮತ್ತು ರುತುರಾಜ್ ಗಾಯಕ್ವಾಡ್ ಸೇರಿದಂತೆ 13 ಆಟಗಾರರ ಕೊರೊನಾ ವರದಿ ಪಾಸಿಟಿವ್ ಬಂದಿತ್ತು. ಇದರಿಂದ  ಚೆನ್ನೈ ಸೂಪರ್ ಕಿಂಗ್ಸ್ ಗೆ ದೊಡ್ಡ ಹಿನ್ನಡೆಯಾಗಿತ್ತು. ಈ ಕಾರಣದಿಂದಾಗಿ ಇಡೀ ತಂಡ ಸೆಪ್ಟೆಂಬರ್ 4ರವರೆಗೆ ಕ್ವಾರಂಟೈನ್ ನಲ್ಲಿ ಇರಬೇಕಾಯ್ತು. ಎರಡು ಕೋವಿಡ್ 19 ಟೆಸ್ಟ್ ನಂತ್ರ ಉಳಿದ ಆಟಗಾರರು ಅಭ್ಯಾಸ ಶುರು ಮಾಡಿದ್ದರು. ಸೆಪ್ಟೆಂಬರ್ 5ರಿಂದ ಚೆನ್ನೈ ಸೂಪರ್ ಕಿಂಗ್ಸ್ ಅಭ್ಯಾಸ ಶುರು ಮಾಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ  ಚಹಾರ್ ಅಭ್ಯಾಸದ ಫೋಟೋವನ್ನು ಹಂಚಿಕೊಳ್ಳಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...