ಸೆಪ್ಟೆಂಬರ್ 19 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿರುವ ಐಪಿಎಲ್ 13 ಋತುವಿನ ಆರಂಭಿಕ ಪಂದ್ಯದ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ತಂಡದ ವೇಗದ ಬೌಲರ್ ದೀಪಕ್ ಚಹಾರ್ ತಂಡಕ್ಕೆ ವಾಪಸ್ ಆಗಿದ್ದಾರೆ. ಮೂರನೇ ಬಾರಿ ನಡೆದ ಕೋವಿಡ್ 19 ಪರೀಕ್ಷೆ ವರದಿ ನೆಗೆಟಿವ್ ಬಂದಿದೆ.
ನೆಗೆಟಿವ್ ವರದಿ ಬಂದ ನಂತ್ರ ದೀಪಕ್ ಚಹಾರ್ ಕೂಡ ತಂಡದೊಂದಿಗೆ ಅಭ್ಯಾಸ ಆರಂಭಿಸಿದ್ದಾರೆ. ಈ ಮಾಹಿತಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ನೀಡಿದೆ.
ದುಬೈ ತಲುಪಿದ ಕೆಲವು ದಿನಗಳ ನಂತರ, ದೀಪಕ್ ಚಹಾರ್ ಮತ್ತು ರುತುರಾಜ್ ಗಾಯಕ್ವಾಡ್ ಸೇರಿದಂತೆ 13 ಆಟಗಾರರ ಕೊರೊನಾ ವರದಿ ಪಾಸಿಟಿವ್ ಬಂದಿತ್ತು. ಇದರಿಂದ ಚೆನ್ನೈ ಸೂಪರ್ ಕಿಂಗ್ಸ್ ಗೆ ದೊಡ್ಡ ಹಿನ್ನಡೆಯಾಗಿತ್ತು. ಈ ಕಾರಣದಿಂದಾಗಿ ಇಡೀ ತಂಡ ಸೆಪ್ಟೆಂಬರ್ 4ರವರೆಗೆ ಕ್ವಾರಂಟೈನ್ ನಲ್ಲಿ ಇರಬೇಕಾಯ್ತು. ಎರಡು ಕೋವಿಡ್ 19 ಟೆಸ್ಟ್ ನಂತ್ರ ಉಳಿದ ಆಟಗಾರರು ಅಭ್ಯಾಸ ಶುರು ಮಾಡಿದ್ದರು. ಸೆಪ್ಟೆಂಬರ್ 5ರಿಂದ ಚೆನ್ನೈ ಸೂಪರ್ ಕಿಂಗ್ಸ್ ಅಭ್ಯಾಸ ಶುರು ಮಾಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಚಹಾರ್ ಅಭ್ಯಾಸದ ಫೋಟೋವನ್ನು ಹಂಚಿಕೊಳ್ಳಲಾಗಿದೆ.