wwe ಮಾಜಿ ಚಾಂಪಿಯನ್ ದಿ ಗ್ರೇಟ್ ಖಲಿ ಯಾರಿಗೆ ತಾನೇ ಗೊತ್ತಿಲ್ಲ. ದಿಲೀಪ್ ಸಿಂಗ್ ರಾಣಾ ಎಂಬ ಹೆಸರಿದ್ದ ಇವರಿಗೆ wwe ದಿ ಗ್ರೇಟ್ ಖಲಿ ಎಂಬ ಹೆಸರಿಟ್ಟರು. 7.1 ಅಡಿ ಎತ್ತರ ಸದೃಢ ಮೈಕಟ್ಟನ್ನು ಹೊಂದಿರುವ ಖಲಿ ಆಗಾಗ ತಮ್ಮ ವರ್ಕೌಟ್ ವಿಡಿಯೋಗಳನ್ನುಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಇದೀಗ ತಮ್ಮ ವರ್ಕೌಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಇದಕ್ಕೆ ಅಭಿಮಾನಿಗಳಿಂದ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳ ಸುರಿಮಳೆಯೇ ಬಂದಿವೆ.